ಸರಿಗಮಪ ಲಿಟಲ್ ಚಾಂಪ್ ಪಟ್ಟ ಗಗನ್‍ ಗಾವ್ಕರ್ ಮಡಿಲಿಗೆ

ಉಡುಪಿ: ಜೀ ಟಿವಿ ಹಿಂದಿ ವಾಹಿನಿಯು ನಡೆಸುತ್ತಿದ್ದ  ಸರಿಗಮಪ ಲಿಟಲ್ ಚಾಂಪ್ಸ್-5 ರಿಯಾಲಿಟಿ ಶೋಗೆ ತೆರೆಬಿದ್ದಿದ್ದು ಈ ಬಾರಿಯ ಲಿಟಲ್ ಚಾಂಪ್ಸ್ ಪಟ್ಟವನ್ನು ಕರ್ನಾಟಕದ ಏಕೈಕ ಸ್ವರ್ಧಿಯಾಗಿದ್ದ ಉಡುಪಿಯ ಪ್ರತಿಭೆ ಗಗನ್ ಗಾಂವ್ಕರ್ ಅಲಂಕರಿಸಿದ್ದಾರೆ.
     ತನ್ನ ಹಾಡು ಹಾಗೂ ಪ್ರತಿಭೆಯ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಈ 13ರ ಪೋರ ಗಗನ್ ಫೈನಲ್ ಹಂತವನ್ನು ಓಟಿಂಗ್ ಮೂಲಕ ಸುಲಭವಾಗಿ ತಲುಪಿ, ಅಲ್ಲಿಯೂ ಉತ್ತಮ ಪ್ರದರ್ಶನ ನೀಡಿ ನಿಸಾನ್ ಸನ್ನಿ ಕಾರನ್ನು ಪ್ರಶಸ್ತಿಯಾಗಿ ಪಡೆದುಕೊಂಡಿದ್ದಾನೆ.
      ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಮಾತನಾಡಿದ ಗಗನ್ ಭವಿಷ್ಯದಲ್ಲಿ ಎಂಜಿನಿಯರ್ ಹಾಗೂ ಮ್ಯೂಸಿಕ್ ಕಂಪೋಸರ್ ಆಗಬೇಕೆಂದಿದ್ದೇನೆ. ಮುಂದಿನ ದಿನಗಳಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ಅವರನ್ನು ಭೇಟಿಯಾಗುವ ಮತ್ತು  ಅವರ ಚಿತ್ರಕ್ಕೆ ಹಾಡುವ ಆಕಾಂಕ್ಷೆಯಿದೆ ಇದೆ ಎಂದಿದ್ದಾನೆ. ಇದೇ ಸಂದರ್ಭದಲ್ಲಿ ತನ್ನ ಗೆಲುವಿಗೆ ಕಾರಣರಾದ ಎಲ್ಲರಿಗೂ ಆತ ಕೃತಜ್ಞತೆಯನ್ನು ಸಲ್ಲಿಸಿದ್ದಾನೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com