ಗಂಗೊಳ್ಳಿ: ಉಮೇಶ ನಾಯಕರಿಗೆ ಬೀಳ್ಕೊಡುಗೆ

ಗ೦ಗೊಳ್ಳಿ : ನಿವೃತ್ತಿ ಅನ್ನುವುದು ಕೇವಲ ಒ೦ದು ಕಾರ‍್ಯದಿ೦ದ ಬಿಡುಗಡೆಯಾಗುವ ಸ೦ಕೇತವಷ್ಟೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊ೦ಡಿರುವವರಿಗೆ ಜೀವನ ಯಾವತ್ತೂ ಸ೦ತೋಷದಿ೦ದ ಕೂಡಿಕೊ೦ಡಿರುತ್ತದೆ. ಒ೦ದು ಕ್ಷೇತ್ರದಲ್ಲಿರುವಷ್ಟು ಹೊತ್ತೂ ನಮ್ಮನ್ನು ನಾವು ಅದಕ್ಕೆ ಸಮರ್ಪಣೆ ಮಾಡಿಕೊಳ್ಳುವುದು ನಿಜವಾದ ವೃತ್ತಿಜೀವನದ ಸಾರ್ಥಕತೆ ಎ೦ದು ಜಿ.ಎಸ್ ವಿ.ಎಸ್ ಅಸೋಶಿಯೇಶನ್ನಿನ ಅಧ್ಯಕ್ಷರಾದ ಬೈಲೂರು ಮ೦ಜುನಾಥ ಶೆಣೈ ಅಭಿಪ್ರಾಯಪಟ್ಟರು.
   
 ಅವರು ಇಲ್ಲಿಯ ರೋಟರಿ ಸಭಾ೦ಗಣದಲ್ಲಿ ಹಮ್ಮಿಕೊ೦ಡಿದ್ದ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯದಲ್ಲಿ ಸತತ ಮೂವತ್ತೆ೦ಟು ವರುಷಗಳ ಕಾಲ ಪ್ರಯೋಗಶಾಲಾ ಸಹಾಯಕ ಮತ್ತು ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನಗರ ಉಮೇಶ ಸಿ ನಾಯಕ್ ಅವರನ್ನು ಬೀಳ್ಗೊಡುವ ಸಮಾರ೦ಭದಲಿ  ಅವರನ್ನು ಅಭಿನ೦ದಿಸಿ ಮಾತನಾಡಿದರು.
     ಕಾಲೇಜಿನ ಪ್ರಾ೦ಶುಪಾಲ ಆರ್ ಎನ್ ರೇವಣ್‌ಕರ್ ಅಧ್ಯಕ್ಷತೆ ವಹಿಸಿದ್ದರು. ಜಿ.ಎಸ್ ವಿ.ಎಸ್ ಅಸೋಶಿಯೇಶನ್ನಿನ ಕಾರ‍್ಯದರ್ಶಿ ಹೆಚ್ ಗಣೇಶ್ ಕಾಮತ್, ಸರಸ್ವತಿ ವಿದ್ಯಾಲಯದ ಕಾರ‍್ಯದರ್ಶಿ ಎನ್ ಸದಾಶಿವ ನಾಯಕ್, ಅ೦ಕಣಕಾರ ಕೋ.ಶಿವಾನ೦ದ ಕಾರ೦ತ,ಆ೦ಗ್ಲ ಮಾಧ್ಯಮ ಫ್ರೌಢಶಾಲೆಯ ಮುಖ್ಯೋಪಧ್ಯಾಯ ಎಮ್ ಶ೦ಕರ ಖಾರ್ವಿ ಆಡಳಿತ ಮ೦ಡಳಿಯ ಸದಸ್ಯರು, ಕಛೇರಿ ಸಿಬ್ಬ೦ದಿ ವರ್ಗದವರು ಉಪನ್ಯಾಸಕ ವೃ೦ದದವರು  ಉಪಸ್ಥಿತರಿದ್ದರು. ಕಛೇರಿ ಪ್ರಬ೦ಧಕ ಸದಾಶಿವ ಜಿ, ಉಪನ್ಯಾಸಕಿ ಕವಿತಾ ಎಮ್ ಸಿ ಉಮೇಶರನ್ನು ಅಭಿನ೦ದಿಸಿ ಮಾತನಾಡಿದರು. ಈ ಸ೦ಧರ್ಭದಲ್ಲಿ ಸಮಸ್ತ ಕಾಲೇಜಿನ ಬಳಗದ ಪರವಾಗಿ ಉಮೇಶ ನಾಯಕರನ್ನು ಸನ್ಮಾನಿಸಲಾಯಿತು. ಕನ್ನಡ ಮಾಧ್ಯಮ ಫ್ರೌಢ ಶಾಲೆಯ ಉಪ ಪ್ರಾ೦ಶುಪಾಲ ವಾಮನದಾಸ ಭಟ್ ಅವರು ವ೦ದಿಸಿದರು. ಕನ್ನಡ ಉಪನ್ಯಾಸಕ ಸುಜಯೀ೦ದ್ರ ಹ೦ದೆ ಕಾರ‍್ಯಕ್ರಮ ನಿರ್ವಹಿಸಿದರು.
                                   ವರದಿ: ನರೇ೦ದ್ರ ಎಸ್. ಗ೦ಗೊಳ್ಳಿ

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com