ಗಂಗೊಳ್ಳಿಯಲ್ಲಿ ಸಂದೀಪ್ ಉನ್ನಿಕೃಷ್ಣನ್ ಸ್ಮರಣೆ

ಗಂಗೊಳ್ಳಿ:  ಮುಂಬೈ ದಾಳಿಯಲ್ಲಿ ಉಗ್ರರೊಂದಿಗೆ ಸೆಣಸಾಡಿ ವೀರ ಮರಣವನ್ನಪ್ಪಿದ ಮೇಜರ್ ಸಂದೀಪ್ ಉನ್ನಿ ಕೃಷ್ಣನ್ ಅವರ ಜನ್ಮಸ್ಮರಣೆ ಗಂಗೊಳ್ಳಿಯ ದೊಡ್ಡಹಿತ್ಲು ಗೆಳೆಯರ ಬಳಗದ ಆಶ್ರಯದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ  ಜರುಗಿತು.
    ಸಂದೀಪ್ ಉನ್ನಿ ಕೃಷ್ಣನ್ ಜನ್ಮದಿನಾಚರಣೆಯ ಅಂಗವಾಗಿ ದೇಶದ ಪ್ರಧಾನಿಯ ಕರೆಯಂತೆ ಸ್ವಚ್ಛ ಭಾರತ್ ಕಾರ್ಯಕ್ರಮವನ್ನು ಆಯೋಜಿಸಿ ದೊಡ್ಡಹಿತ್ಲು ಪರಿಸರವನ್ನು ಸ್ವಚ್ಛ ಮಾಡಲಾಯಿತು. ಕಾರ್ಯಕ್ರಮಕ್ಕೆ ಗಂಗೊಳ್ಳಿ ಬಿಜೆಪಿ ಯುಮೋರ್ಚಾ ಅಧ್ಯಕ್ಷ ದಿಲೀಪ್ ಖಾರ್ವಿ ಚಾಲನೆ ನೀಡಿದರು.
      ಗಂಗೊಳ್ಳಿಯ ವೀರ ಸಾವರ್ಕರ್ ದೇಶಪ್ರೇಮಿಗಳ ಬಳಗ, ಕ್ರಾಂತಿವೀರರ ಅಭಿಮಾನಿ ಬಳಗ, ಶ್ರೀ ಗುರುಮಾರುತಿ ಸ್ಪೋರ್ಟ್ ಕ್ಲಬ್‌ನ ಸದಸ್ಯರು, ದೊಡ್ಡಹಿತ್ಲು ಗೆಳೆಯರ ಬಳಗದ ಮಹಿಳಾ ಸದಸ್ಯರು ಹಾಗೂ ಸ್ಥಳೀಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com