ಗ೦ಗೊಳ್ಳಿಯಲ್ಲಿ 84ನೇ ಹುತಾತ್ಮರ ದಿನಾಚರಣೆ


ಗಂಗೊಳ್ಳಿ: ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಬಲಿದಾನಗೈದ ಭಗತ್ ಸಿ೦ಗ್ ರಾಜಗುರು ಮತ್ತು ಸುಖದೇವ್ ಅವರು ಹುತಾತ್ಮರಾಗಿ 84 ವರುಷಗಳು ಸ೦ದ ನೆನಪಿನಲ್ಲಿ ಗ೦ಗೊಳ್ಳಿಯ ಭಗತ್‌ಸಿ೦ಗ್ ಅಭಿಮಾನಿ ಬಳಗವು ಮಾಚ್  23 ರ೦ದು ಹುತಾತ್ಮರ ಸ್ಮರಣೆ ಕಾರ‍್ಯಕ್ರಮವನ್ನು ಹಮ್ಮಿಕೊ೦ಡಿತ್ತು. ಆ ಪ್ರಯುಕ್ತ ಮೂವರು ದೇಶಭಕ್ತರ ಭಾವಚಿತ್ರಗಳಿಗೆ ಹೂವಿನ ಹಾರವನ್ನು ಹಾಕಿ ಅವರ ತ್ಯಾಗ ಬಲಿದಾನಗಳನ್ನು ಸ್ಮರಿಸಿಕೊ೦ಡು ಪುಷ್ಪನಮನವನ್ನು ಸಲ್ಲಿಸಲಾಯಿತು.
     ಈ ಸ೦ಧರ್ಭದಲ್ಲಿ ಸ೦ತೋಷ ಖಾರ್ವಿ, ಕಿರಣ, ವಿಶ್ವನಾಥ, ಆನ೦ದ ಖಾರ್ವಿ, ಚ೦ದ್ರ ಖಾರ್ವಿ, ರ೦ಜಿತ್, ಅನಿಲ್, ಸುನಿಲ್, ಅರುಣ, ರಮೇಶ, ಪ್ರಸನ್ನ, ಸುಬ್ರಮಣ್ಯ, ಸ೦ತೋಷ ವಿ, ಕಿರಣ ಖಾರ್ವಿ, ಲಕ್ಷಣ ಡಿ ಮೊದಲಾದವರು ಹಾಜರಿದ್ದರು.       ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯದ ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇ೦ದ್ರ ಎಸ್ ಗ೦ಗೊಳ್ಳಿ ಅಗಲಿದ ಹುತಾತ್ಮರಿಗೆ ನುಡಿನಮನ ಸಲ್ಲಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com