ಕುಂದಾಪುರ: ಇಲ್ಲಿನ ಹೊಸ ಬಸ್ ನಿಲ್ದಾಣದಲ್ಲಿ ಶಿರ್ವ ಸಂತಮೇರಿ ಕಾಲೇಜಿನ ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿಗಳಿಂದ ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬಡಗುಬೆಟ್ಟು ಕೋ. ಆಪರೇಟಿವ್ ಸೊಸೈಟಿ ಹಾಗೂ ನೇಟಿವ್ ಆರ್ಗನೈಸೇಷನ್ ಉಡುಪಿ ಇದರ ಸಹಕಾರದೊಂದಿಗೆ ಮಹಿಳೆಯರ ಮೇಲಿನ ಕೌಟುಂಬಿಕ ಹಿಂಸೆಯನ್ನು ತಡೆಯುವ ಸಲುವಾಗಿ 'ಹೆಣ್ಣು ಜಗದ ಕಣ್ಣು' ಬೀದಿನಾಟಕ ಅಭಿಯಾನ ಜರುಗಿತು.
ಕುಂದಾಪುರದಲ್ಲಿ ನಡೆದ ಬೀದಿ ನಾಟಕಕ್ಕೆ ಬಡಗುಬೆಟ್ಟು ಕೋ. ಆಪರೇಟಿವ್ ಸೊಸೈಟಿಯ ಜನರಲ್ ಮ್ಯಾನೆಜರ್ ಜಯಕರ್ ಶೆಟ್ಟಿ ಇಂದ್ರಾಳಿ ಚಾಲನೆ ನೀಡಿದರು, ಕುಂದಾಪುರ ಲಯನ್ಸ್ ಕ್ಲಬ್ ನ ರಮಾನಂದ, ನೇಟಿವ್ ಆರ್ಗನೈಸೇಷನ್ ನ ನಿರ್ದೇಶಕ ಪ್ರೇಮಾನಂದ ಕಲ್ಮಾಡಿ, ಸಂತಮೇರಿ ಕಾಲೇಜಿನ ಉಪನ್ಯಾಸಕರಾದ ವಿಘ್ನೇಶ್ ಮತ್ತು ಲಕ್ಷ್ಮೀ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಿಮ್ಮವರಿಗಾಗಿ, ನಿಮ್ಮ ಮಕ್ಕಳಿಗಾಗಿ ಹಿಂಸೆ ನಿಲ್ಲಿಸಿ, ಮನೆಮನಗಳಲ್ಲಿ ಸಾಮರಸ್ಯದ ಬದುಕು ಕಟ್ಟೋಣ ಎಂಬ ಘೋಷವಾಕ್ಯದೊಂದಿಗೆ ಉಡುಪಿ ಜಿಲ್ಲೆಯ ಮೂರು ತಾಲೂಕು ಕೇಂದ್ರಗಳಲ್ಲಿ ನಾಟಕವನ್ನು ಪ್ರದರ್ಶಿಸಲಾಯಿತು.
0 comments:
Post a Comment