ಹಿಂದೂ ಸಮಾಜೋತ್ಸವದ ವಾಹನ ನಿಲುಗಡೆ ಸೂಚನೆ

ಉಡುಪಿ : ಹಿಂದೂ ಸಮಾಜೋತ್ಸವಕ್ಕೆ ಆಗಮಿಸುವ ವಾಹನಗಳನ್ನು ನಿಲುಗಡೆಗೊಳಿಸಲು ವಿಹಿಂಪದವರು ಕೆಳಗಿನಂತೆ ಸ್ಥಳ ನಿಗದಿಪಡಿಸಿದ್ದಾರೆ. 

ಕುಂದಾಪುರ ಕಡೆಯಿಂದ ಬರುವ ವಾಹನಗಳು ಕರಾವಳಿ ಬೈಪಾಸ್‌ ಮೂಲಕ ಅಂಬಲಪಾಡಿ-ಬ್ರಹ್ಮಗಿರಿ ಮಾರ್ಗವಾಗಿ ಬಂದು ಪುರಭವನದ ಬಳಿ ಜನರನ್ನು ಇಳಿಸಿ ಎಲ್.ಐ.ಸಿ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸಬೇಕು. ಸಂಜೆ 4.30ರ ಅನಂತರ ಕೆಎಂ ಮಾರ್ಗ, ಕಲ್ಸಂಕವಾಗಿ ರೋಯಲ್‌ ಗಾರ್ಡನ್‌ನಲ್ಲಿ ವಾಹನಗಳನ್ನು ನಿಲ್ಲಿಸಬೇಕು. ಸಭೆ ಬಳಿಕ ಗುಂಡಿಬೈಲು, ಅಂಬಾಗಿಲು ಮಾರ್ಗವಾಗಿ ಕುಂದಾಪುರ ಕಡೆಗೆ ತೆರಳಬೇಕು 

ಕಾರ್ಕಳ ಕಡೆಯಿಂದ ಬರುವ ವಾಹನಗಳು ಮಣಿಪಾಲ- ಶಾರದಾ ಕಲ್ಯಾಣ ಮಂಟಪ- ಬೀಡಿನಗುಡ್ಡೆ ಮಾರ್ಗವಾಗಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದ ವಠಾರದಲ್ಲಿ ಜನರನ್ನು ಇಳಿಸಬೇಕು. ಸಂಜೆ 4.30ರ ಅನಂತರ ವಾಹನಗಳನ್ನು ಬೀಡಿನಗುಡ್ಡೆಯಲ್ಲಿ ಪಾರ್ಕಿಂಗ್‌ ಮಾಡಬೇಕು. ಸಭೆ ಬಳಿಕ ಹೆಬ್ರಿ, ಪೆರ್ಡೂರು, ಹಿರಿಯಡಕ, ಬೈಲೂರು ಕಡೆಗೆ ಹೋಗುವ ಬಸ್ಸುಗಳು ಮಣಿಪಾಲ ಮಾರ್ಗವಾಗಿ ಮತ್ತು ಕಾರ್ಕಳ ಕಡೆಗೆ ಹೋಗುವ ಬಸ್ಸುಗಳು ಬೀಡಿನಗುಡ್ಡೆ, ಅಲೆವೂರು, ಮೂಡುಬೆಳ್ಳೆ ಮಾರ್ಗವಾಗಿ ಹೋಗಬೇಕು ಎಂದು ಪ್ರಕಟನೆ ತಿಳಿಸಿದೆ.

ಪೋಟೋ: ಕೊಂಕಣ್ ವರ್ಲ್ಡ್
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com