ತೊಗಾಡಿಯಾ ಉಡುಪಿ ಪ್ರವೇಶ ನಿಷೇಧ. ಹೈಕೋರ್ಟ್ ಗೆ ವಿಹಿಂಪ

ಉಡುಪಿ: ಮಾರ್ಚ್.9ರಂದು ಉಡುಪಿಯಲ್ಲಿ ಹಿಂದೂ ಸಮಾಜೋತ್ಸವ ಜರುತ್ತಿರುವ ಹಿನ್ನೆಲೆಯಲ್ಲಿ , ವಿಶ್ವ ಹಿಂದೂ ಪರಿಷತ್ ನ ಅಂತಾರಾಷ್ಟ್ರೀಯ ನಾಯಕ ಡಾ. ಪ್ರವೀಣ್ ಬಾಯಿ ತೊಗಾಡಿಯಾ ಉಡುಪಿ ಜಿಲ್ಲಾ ಪ್ರವೇಶಿಸುವುದನ್ನು ಮಾ. 7ರಿಂದ 13ರ ತನಕ ನಿಷೇಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ಅಣ್ಣಾಮಲೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 

      ಉಡುಪಿ ಜಿಲ್ಲೆಯ ಕುಂದಾಪುರ, ಗಂಗೊಳ್ಳಿ, ಕೋಡಿ ಕನ್ಯಾನ, ಕಾಪುವಿನಲ್ಲಿ ಕಳೆದ ಮೂರ‌್ನಾಲ್ಕು ತಿಂಗಳಲ್ಲಿ ಅಹಿತಕಾರಿ ಘಟನೆ ನಡೆದ ಹಿನ್ನೆಲೆಯಲ್ಲಿ ತೊಗಾಡಿಯಾ ಉಡುಪಿ ಜಿಲ್ಲೆ ಪ್ರವೇಶ ನಿಷೇಧಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದ ಬಳಿಕ ಜಿಲ್ಲಾಧಿಕಾರಿಗಳು ವಿಹಿಂಪ ನಾಯಕರಿಗೆ ನೋಟಿಸ್ ಜಾರಿ ಮಾಡಿದ್ದರು. ಆದರೆ ಇದಕ್ಕೆ ವಿಹಿಂಪ ಪ್ರತಿಕ್ರಿಯಿಸಿರಲಿಲ್ಲ. ಜಿಲ್ಲಾಧಿಕಾರಿಗಳು ಮಾರ್ಚ್ 6 ರಾತ್ರಿ ತೋಗಡಿಯಾ ನಿರ್ಬಂಧ ಆದೇಶವನ್ನು ಹೊರಡಿಸಿದರು.
     ತೊಗಾಡಿಯಾ ವಿರುದ್ಧ ಐದು ರಾಜ್ಯಗಳಲ್ಲಿ ಕೋಮು ದ್ವೇಷ ಭಾಷಣದ ಆರೋಪದ ಹಿನ್ನೆಲೆಯಲ್ಲಿ 19 ಪ್ರಕರಣ ದಾಖಲಾಗಿದ್ದು ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಹೈಕೋರ್ಟ್ ಮೆಟ್ಟಿಲೇರಿದ ವಿಹಿಂಪ
        ವಿಹಿಂಪ ಅಂತಾರಾಷ್ಟ್ರೀಯ ನಾಯಕ ಡಾ. ತೊಗಾಡಿಯಾ ಅವರಿಗೆ ಉಡುಪಿ ಜಿಲ್ಲೆ ಪ್ರವೇಶಿಸದಂತೆ ಉಡುಪಿ ಜಿಲ್ಲಾಡಳಿತ ನಿರ್ಬಂಧ ಹೇರಿದ್ದರ ವಿರುದ್ಧ ಸೋಮವಾರ ಹೈಕೋರ್ಟಿಗೆ ಅರ್ಜಿ ಸಲ್ಲಿಸಲಾಗುವುದು ಎಂದು ವಿಹಿಂಪ ಜಿಲ್ಲಾಧ್ಯಕ್ಷ ಬಿ. ಸುಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ. 
    ಹೈಕೋರ್ಟು ಜಿಲ್ಲಾಡಳಿತ ವಿಧಿಸಿದ ನಿರ್ಬಂಧಕ್ಕೆ ತಡೆಯಾಜ್ಞೆ ನೀಡಿ, ಅಸಾಂವಿಧಾನಿಕ ನೆಲೆಯಲ್ಲಿ ತಕ್ಷಣ ತೆರವುಗೊಳಿಸಿದರೆ ಮುಂಬೈನಿಂದ ವಿಮಾನದ ಮೂಲಕ ಡಾ. ತೊಗಾಡಿಯಾ ಉಡುಪಿಗೆ ಬರಲಿದ್ದಾರೆ, ಮಾ. 9 ರಂದು ನಡೆಯುವ ಸಮಾಜೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ಮಂಗಳೂರಿನ  ಹಿಂದೂ ಸಮಾಜೋತ್ಸವದಲ್ಲಿ ಪಾಲ್ಗೊಂಡಿದ್ದ ಸಾದ್ವಿ ಬಾಲಿಕಾ ಸರಸ್ವತಿ ಅವರ ಆಗಮನ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com