ಕೊಲ್ಲೂರು ಮನ್ಮಹಾರಥೋತ್ಸವಕ್ಕೆ ಚಾಲನೆ

ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಮಾರ್ಚ್ 14ರಂದು ಜರುಗಲಿರುವ ಮನ್ಮಹಾರಥೋತ್ಸವಕ್ಕೆ ಪೂರ್ವಭಾವಿಯಾಗಿ ರಥೋತ್ಸವದ ಧಾರ್ಮಿಕ ವಿಧಿ ವಿಧಾನಗಳಿಗೆ ಚಾಲನೆ ನೀಡಲಾಯಿತು. 
   ಬೆಳಗ್ಗೆ ಗಣಪತಿ ಪ್ರಾರ್ಥಣೆ, ಸಿಂಹಯಾಗ, ಅಂಕುರಾಧಿವಾಸ ವಿಧಿ ನಡೆಸಿ ಧ್ವಜಾರೋಹಣ ನೆರವೇರಿಸುವ ಮೂಲಕ ಮನ್ಮಹಾರಥೋತ್ಸವಕ್ಕೆ ಅಧಿಕತ ಚಾಲನೆ ನೀಡಲಾಯಿತು. ದೇವಳದ ಪ್ರಧಾನ ತಂತ್ರಿ ರಾಮಚಂದ್ರ ಅಡಿಗ ಧಾರ್ಮಿಕ ವಿಧಿ ನೆರವೇರಿಸಿದರು. ಶ್ರೀದೇವರ ರಥಾರೋಹಣ, ಯಾಗಶಾಲಾ ಪ್ರವೇಶ, ಕೌತುಕಬಂಧನ, ಮಹೂರ್ತ ಬಲಿ, ಉತ್ಸವ ನಡೆಯಿತು. ದೇವಳದ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ಕಷ್ಣಪ್ರಸಾದ್ ಅಡ್ಯಂತಾಯ, ವ್ಯವಸ್ಥಾಪನಾ ಮಂಡಳಿಯ ಸರ್ವ ಸದಸ್ಯರು, ಪ್ರಭಾರ ಕಾರ್ಯನಿರ್ವಹಣಾಧಿಕಾರಿ ವಿ.ಪ್ರಸನ್ನ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕಷ್ಣಮೂರ್ತಿ, ದೇವಳದ ಅಧೀಕ್ಷಕ ರಾಮಕಷ್ಣ ಅಡಿಗ ಇದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com