ಕೊಲ್ಲೂರು ಸೌಪರ್ಣಿಕಾ ತೀರ್ಥದಲ್ಲಿ ತೆಪ್ಪೋತ್ಸವ

ಕೊಲ್ಲೂರು: ಶ್ರೀ  ಮೂಕಾಂಬಿಕಾ ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವದ ಪ್ರಯುಕ್ತ  ಓಕುಳಿ, ತೆಪ್ಪೋತ್ಸವ, ಮತ್ತು ಅವಭ್ರತ ಸ್ನಾನ ಸರದಿಯು ಅರ್ಚಕ ಕೆ. ರಾಮಚಂದ್ರ ಅಡಿಗರ ನೇತೃತ್ವದಲ್ಲಿ  ವಿಜ್ರಂಭಣೆಯಿಂದ ಜರುಗಿತು. 
ಉತ್ಸವದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಕೃಷ್ಣಪ್ರಸಾದ್ ಅಡ್ಯಂತಾಯ, ಸಮಿತಿ ಸದಸ್ಯರಾದ ಶ್ರೀನಿವಾಸ ಕಲ್ಲೂರಾಯ,ಡಾ| ಅತುಲ್ ಕುಮಾರ್ ಶೆಟ್ಟಿ, ರಾಜೇಶ್ ಕೆ.ಎಂ. ಶ್ರೀಮತಿ ಕಲ್ಪನಾ ಭಾಸ್ಕರ್, ಶ್ರೀಮತಿ ಸವಿತಾ ಯು. ದೇವಾಡಿಗ, ಸಹಾಯಕ ಕಾರ್ಯನಿರ್ವಹಣಾಧಿಕಾರಿ, ಹೆಚ್. ಕೃಷ್ಣಮೂರ್ತಿ, ಅಧೀಕ್ಷಕ ರಾಮಕೃಷ್ಣ ಅಡಿಗ, ನಿಕಟಪೂರ್ವ ಕಾರ್ಯನಿರ್ವಹಣಾಧಿಕಾರಿ ಎಲ್.ಎಸ್. ಮಾರುತಿ, ಅರ್ಚಕ, ಪುರೋಹಿತರು, ಪೋಲೀಸ್ ಠಾಣಾಧಿಕಾರಿ ಹಾಗೂ ಸಿಬ್ಬಂದಿ ವರ್ಗ ಊರ ಸಮಸ್ತರು, ದೇವಳದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com