ಕೊಲ್ಲೂರು ಉತ್ಸವ ಮೊದಲಿನಂತೆ ಓಲಗ ಮಂಟಪದ ತನಕ ವಿಸ್ತರಣೆ

ಕೊಲ್ಲೂರು: ಕೊಲ್ಲೂರು ರಥೋತ್ಸವಕ್ಕೆ ಕ್ಷಣಗಣನೆಗೆ ಆರಂಭವಾಗಿದ್ದು ದೇವಿಯ ಉತ್ಸವವನ್ನು ಹಳೆ ಸಂಪ್ರದಾಯದಂತೆ ಓಲಗ ಮಂಟಪದವರೆಗೂ ಮುನ್ನಡೆಸಲು ವ್ಯವಸ್ಥಾಪನಾ ಮಂಡಳಿ ನಿರ್ಧಾರ ತೆಗೆದುಕೊಂಡಿದೆ. 
   ಕೆಲವು ತಿಂಗಳುಗಳ ಹಿಂದೆ ಬ್ರಹ್ಮೈಕ್ಯರಾದ ಕೊಲ್ಲೂರು ನಿತ್ಯಾನಂದ ಆಶ್ರಮದ ಶ್ರೀವಿಮಲಾನಂದ ಸ್ವಾಮೀಜಿಯವರ ಸಮಾಧಿ ದೇವಿಯ ಗಡಿಯೊಳಗೆ ನಿರ್ಮಿಸಲಾಗಿದೆ ಎಂಬ ಕಾರಣಕ್ಕೆ ಜೀವಂತವಾಗಿರುವ ವಿವಾದ ಮತ್ತೆ ಸಭೆಯಲ್ಲಿ ಪ್ರತಿಧ್ವನಿಸಿತ್ತು.
     ಸಮಾಧಿ ನಿರ್ಮಾಣ ದೇವಿಯ ಗಡಿಯೊಳಗೆ ಇರುವುದರಿಂದ ಸ್ಥಳಾಚಾರ, ಸಂಪ್ರದಾಯಕ್ಕೆ ಧಕ್ಕೆ ಉಂಟಾಗಿರುವ ಹಿನ್ನೆಲೆಯಲ್ಲಿ ರಥೋತ್ಸವದ ದಿನ ದೇವಿಯ ಉತ್ಸವ ಓಲಗಮಂಟಪದತ್ತ ಸಾಗಿಸುವುದು ಸರಿಯಲ್ಲ ಎಂದು ಕೆಲವು ಅರ್ಚಕರು ವಿರೋಧ ವ್ಯಕ್ತಪಡಿಸಿದ್ದರು. ಇನ್ನೊಂದೆಡೆ ಊರ ಗ್ರಾಮಸ್ಥರು ಉತ್ಸವ ಓಲಗ ಮಂಟಪದವರೆಗೂ ಬರಬೇಕು ಎಂದು ದೇವಳದ ವ್ಯವಸ್ಥಾಪನಾ ಮಂಡಳಿಗೆ ಮನವಿ ಸಲ್ಲಿಸಿದ್ದರು. ಈ ಕುರಿತು ಚರ್ಚಿಸಲು ನಡೆದ ಸಭೆಯಲ್ಲಿ ಪರವಿರೋಧ ನಿಲುವು ವ್ಯಕ್ತ ವಾಯಿತಾದರೂ ಗ್ರಾಮಸ್ಥರ ಆಗ್ರಹದಂತೆ ಓಲಗಮಂಟಪದ ತನಕ ದೇವಿ ಉತ್ಸವ ವಿಸ್ತರಿಸಲು ತೀರ್ಮಾನ ತೆಗೆದು ಕೊಳ್ಳಲಾಗಿದೆ. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com