ಕೊಂಕಣಿ ರಂಗೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಬೈಂದೂರು: ಇಂದು ರಾಜ್ಯದಲ್ಲಿ ಸುಮಾರು 158ಕ್ಕಕ್ಕೂ ಅಕ ಜನರು ಕೊಂಕಣಿ ಭಾಷೆಯನ್ನು ಆಡುಭಾಷೆಯಾಗಿ ಮಾತನಾಡುತ್ತಿದ್ದಾರೆ.  ಕೇರಳ, ಕರ್ನಾಟಕ ಹಾಗೂ ಗೋವಾ ರಾಜ್ಯಗಳು ಕೊಂಕಣಿ ಸಾಹಿತ್ಯ ಅಕಾಡೆಮಿಯನ್ನು ಹೊಂದಿದೆ. ಕೊಂಕಣೆ ಭಾಷೆ  ದೇಶದ ಪ್ರಮುಖ 15 ಭಾಷೆಗಳಲ್ಲಿ ಇದು ಒಂದು ಎನ್ನುವ ಮನ್ನಣೆ ಪಡೆದಿದೆ. ಇಂತಹ ಭಾಷೆ ಮಾತನಾಡುವ ಜನರು ಕಲೆ, ಸಾಹಿತ್ಯ, ಹಾಗೂ ರಂಗಭೂಮಿಗೆ ನೀಡಿದ ಕೊಡುಗೆ ಅಪಾರವಾಗಿದೆ ಎಂದು ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.
   
     ಉಪ್ಪುಂದ ಶಂಕರಕಲಾ ಮಂದಿರದಲ್ಲಿ ರಂಗ ತರಂಗ ಉಪ್ಪುಂದದ ಆಶ್ರಯದಲ್ಲಿ ಎ. 10 ರಿಂದ ಎ.12ರ ವರಗೆ ನಡೆಯುವ ಕೊಂಕಣೆ ರಂಗೋತ್ಸವ ಹಾಗೂ ರಂಗ ಪ್ರಶಸ್ತಿ ಪ್ರಧಾನ ಸಮಾರಂಭದ ಪೂರ್ವಭಾವಿಯಾಗಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ ಪ್ರಥಮ ರಂಗೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ರಂಗ ತರಂಗ ಉಪ್ಪುಂದ, ರಾಜ್ಯಮಟ್ಟದ ಕೊಂಕಣಿ ರಂಗೋತ್ಸವ ಕಾರ್ಯಕ್ರಮದ ಮೂಲಕ ಕೊಂಕಣಿ ಪ್ರತಿಭೆಗಳನ್ನು ಗುರುತಿಸುವ ಕಾರ್ಯಮಾಡುತ್ತಿರುವುದು ಶ್ಲಾಘನೀಯವಾಗಿದೆ, ಇಂತಹ ಕಾರ್ಯಕ್ರಮಗಳ ಮೂಲಕ ಸಮಾಜ ಕಟ್ಟುವ ಕೆಲಸವಾಗಲಿ ಎಂದು ಶುಭ ಹಾರೈಸಿದರು.

ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕ ಬಿ.ಎಸ್. ಸುರೇಶ ಶೆಟ್ಟಿ ರಂಗ ತರಂಗ ರಿ. ಉಪ್ಪುಂದದ ನೂತನ ಲಾಂಛನ ಬಿಡುಗಡೆ ಮಾಡಿದರು. ನಿರ್ದೇಶಕರಾದ ಅಣ್ಣಪ್ಪ ಖಾರ್ವಿ, ಮೋಹನ್ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಕಾರಿ ಮಮತಾ ವಿ. ಮಯ್ಯ, ಉಪ್ಪುಂದ ರಂಗ ತರಂಗದ ಅಧ್ಯಕ್ಷ ಓಂ ಗಣೇಶ್, ಕಾರ್ಯದರ್ಶಿ ಶಶಿಧರ ಶೆಣೈ, ಸಂಚಾಲಕ ಶ್ರೀಶ ಭಟ್  ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com