ಕೋಮುವಾದಿ ಶಕ್ತಿಗಳ ನಿಗ್ರಹ ಆಗ್ರಹಿಸಿ ಸಿಪಿಎಂ ಪ್ರತಿಭಟನೆ

ಕುಂದಾಪುರ: ಕೋಮುವಾದಿ ಶಕ್ತಿಗಳ ನಿಗ್ರಹ ಆಗ್ರಹಿಸಿ  ಸಿಪಿಎಂ ಕುಂದಾಪುರ ತಾಲೂಕು ಸಮಿತಿ ಶಾಸ್ತ್ರೀವತ್ತದಲ್ಲಿ ಪ್ರತಿಭಟನೆ ನಡೆಸಿತು. ಪ್ರತಿಭಟನೆಯ ನೆತೃತ್ವ ವಹಿಸಿದ್ದ ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯ ಕೆ.ಶಂಕರ್ ಮಾತನಾಡಿ ಜನತೆಯನ್ನು ಪರಸ್ಪರ ಕೋಮು ಆಧಾರದಲ್ಲಿ ಎತ್ತಿಕಟ್ಟಿ ವಿಜಂಭಿಸುತ್ತಿರುವ ಕೋಮು ಶಕ್ತಿಗಳ ವಿರುದ್ಧ ರಾಜ್ಯ ಸರಕಾರ ಮೌನವಹಿಸಿದ್ದರ ಪರಿಣಾಮ  ವ್ಯಾಪಕ ಹಿಂಸಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು.
      ಇತ್ತೀಚೆಗೆ ಕುಂದಾಪುರ ತಾಲೂಕಿನ ಗಂಗೊಳ್ಳಿ ಮತ್ತು ಹಳವಳ್ಳಿ ಪ್ರದೇಶಗಳಲ್ಲಿ ಕಿಡಿಗೇಡಿಗಳ ವರ್ತನೆಯಿಂದಾಗಿ ಕೋಮು ದ್ವೇಷ ಹರಡುವ ಆತಂಕವಿ ತ್ತಾದರೂ ಪೊಲೀಸ್‌ ಇಲಾಖೆಯ ಸೂಕ್ತ ಮಧ್ಯ ಪ್ರವೇಶ ಮತ್ತು ಎರಡೂ ಕೋಮುಗಳಿಗೆ ಸೇರಿದ ಶಾಂತಿ ಪ್ರಿಯ ಜನರು ಅದನ್ನು ತಡೆದರು ಎಂಬುದನ್ನು ಗಮನಿಸಬೇಕು  ಎಂದರು.
   ಸಿಪಿಎಂ ಮುಖಂಡರಾದ ಎಚ್.ನರಸಿಂಹ ಮಾತನಾಡಿ ಕೋಮುವಾದಿಗಳ ಅಜೆಂಡಾ ಉತ್ತಮ ರೀತಿಯಲ್ಲಿ ಸಾಕಾರಗೊಳಿಸಲು ರಾಜ್ಯ ಸರಕಾರ ಪ್ರೋತ್ಸಾಹ ನೀಡುತ್ತಿದೆಯೇ ಎಂಬ ವಾತಾವರಣ ಮೂಡಿದೆ ಎಂದರು. ಮಹಾಬಲ ವಡೇರಹೋಬಳಿ, ಯು.ದಾಸು ಭಂಡಾರಿ, ರಾಜೀವ ಪಡುಕೋಣೆ, ವೆಂಕಟೇಶ್ ಕೋಣಿ, ಸುರೇಶ್ ಕಲ್ಲಾಗರ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ರಾಜೇಶ್ ವಡೇರಹೋಬಳಿ ವಂದಿಸಿದರು
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com