ಮೀನುಗಾರರಿಗೆ ಸವಲತ್ತು ವಿತರಣೆ

ಕುಂದಾಪುರ:  ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ ಸವಲತ್ತು ವಿತರಣೆ ಮತ್ತು ಮಾಹಿತಿ ಕಾರ್ಯಕ್ರಮ ಜರುಗಿತು. ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಫಲಾನುಭವಿಗಳಾದ ಸಂಕಷ್ಟ ಪರಿಹಾರ ನಿಧಿಯಡಿ ಗಿರಿಜಾ ರಾಧಾ ಮೊಗವೀರ್ತಿಯವರಿಗೆ ರೂ.50 ಸಾವಿರ, ನಾಗಮ್ಮ ಎಂಬವರಿಗೆ ರೂ.1ಲಕ್ಷ, ಜನತಾ ವಿಮಾ ಪರಿಹಾರ ಯೋಜನೆಯಡಿ ಲಕ್ಷ್ಮೀ ಎಂಬವರಿಗೆ ರೂ.1ಲಕ್ಷ, ತಿಮ್ಮಪ್ಪ ಎಂಬವರಿಗೆ ರೂ.25 ಸಾವಿರ ನೆರವಿನ ಚೆಕ್ ವಿತರಿಸಿದರು. ನಾಡಾದೋಣಿ ಮೀನುಗಾರರಿಗೆ ಮೀನುಗಾರಿಕಾ ಸಲಕರಣೆಗಳ ಕಿಟ್ ವಿತರಿಸಿದ ಬಳಿಕ  ಮಾತನಾಡಿದರು.
      ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪಾರ್ಶ್ವನಾಥ್ ಮಾಹಿತಿ ನೀಡಿ  ರಾಜ್ಯ ಸರಕಾರವು ವಸತಿ ರಹಿತರಿಗೆ ಮನೆ ವಿತರಣೆ ಜೊತೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಜಂಟಿ ಸಹಯೋಗದೊಂದಿಗೆ ಉಳಿತಾಯ ಪರಿಹಾರ ಯೋಜನೆ ಜಾರಿಗೊಳಿಸಿದೆ. ಮೀನುಗಾರಿಕೆ ನಿಷೇಧಿತ ಅವಧಿಯಲ್ಲಿ ಬಹಳಷ್ಟು ಪ್ರಯೋಜನ ಆಗಲಿದೆ. ತಾಲೂಕಿನಲ್ಲಿ 22 ಸಾವಿರ ಮಂದಿ ಈಗಾಗಲೆ ಯೋಜನೆಗೆ ನೊಂದಾವಣೆಗೊಂಡಿದ್ದಾರೆ. ರೂ.900 ಪಾವತಿಸಿ ಸದಸ್ಯರಾದಲ್ಲಿ ಸರಕಾರ 2700 ಹಣ ನೀಡಲಿದೆ. ಅಲ್ಲದೆ ಸಂಕಷ್ಟ ಪರಿಹಾರ ನಿಧಿಯಡಿ ರೂ.1ಲಕ್ಷ ನೆರವು ನೀಡಲಾಗುತ್ತಿದ್ದು ಈ ಬಾರಿ 1ಲಕ್ಷ 50 ಸಾವಿರ ಲೀಟರ್ ಡಿಸೇಲ್ ವಿತರಣೆ ಮಾಡಲಾಗಿದೆ ಎಂದರು. 
   ಉಡುಪಿ ಜಿ.ಪಂ.ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ಜಿ.ಪಂ.ಸದಸ್ಯ ಗಣಪತಿ ಟಿ.ಶ್ರೇಯಾನ್, ಕುಂದಾಪುರ ತಾ.ಪಂ.ಅಧ್ಯಕ್ಷ ಭಾಸ್ಕರ ಬಿಲ್ಲವ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com