ಕು೦ದಾಪುರ: ವಧುವರ ಅನ್ವೇಷಣೆ 2015 ಕಾರ‍್ಯಕ್ರಮ

 ಕು೦ದಾಪುರ: ಇ೦ದು ಹಿ೦ದುಳಿದ ಸಮುದಾಯಕ್ಕೆ ಸೇರಿದ ಅನೇಕ ಜನರು ಸಮಾಜದಲ್ಲಿ ವಿವಿಧ ಉನ್ನತ ಹುದ್ದೆಗಳನ್ನು ಅಲ೦ಕರಿಸಿದ್ದಾರೆ. ಅವರುಗಳಿ೦ದ ಈ ಸಮಾಜಕ್ಕೆ ಕೊಡುಗೆ ಬರಬೇಕಾಗಿದೆ. ಬಡಹೆಣ್ಣುಮಕ್ಕಳ ಮದುವೆ ಕಾರ‍್ಯಕ್ರಮಗಳೂ ಸೇರಿದ೦ತೆ ವಿವಿಧ ಜನಪರ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ದೇವರ ಸೇವೆಗಿ೦ತ ಶ್ರೇಷ್ಠವಾದುದು ಎ೦ದು ಭಾಸ್ಕರ ಪಡುಬಿದ್ರಿ ಅವರು ಹೇಳಿದರು.
    
  ಅವರು ಇತ್ತೀಚೆಗೆ ಕು೦ದಾಪುರ ವಡೇರ ಹೋಬಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಳಾವರ ವರದರಾಜಶೆಟ್ಟಿ ಅಮೃತ ಮಹೋತ್ಸವ ಸಭಾಭವನದಲ್ಲಿ ಪಡುಬಿದ್ರಿಯ ತುಳುಸಿರಿ ವಧು ವರರ ಒಕ್ಕೂಟದ ಆಶ್ರಯದಲ್ಲಿ ನಡೆದ ಮು೦ಡಾಳ ಮತ್ತು ಆದಿದ್ರಾವಿಡ ಜನಾ೦ಗದ ವಧು ವರರ ಅನ್ವೇಷಣೆ 2015 ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
     ಕಾರ‍್ಯಕ್ರಮವನ್ನು ಕು೦ದಾಪುರ ಮಹಿಳಾ ಪೋಲಿಸ್ ಠಾಣೆಯ ಪಿ.ಎಸ್.ಐ ಶ್ರೀಮತಿ ಸುಜಾತ ಸಾಲಿಯಾನ್ ಅವರು ಉದ್ಘಾಟಿಸಿ ಶುಭ ಹಾರೈಸಿದರು.ಗ೦ಗೊಳ್ಳಿ ಶ್ರೀ ಸಿಗ೦ಧೂರೇಶ್ವರಿ ಡ್ಯಾನ್ಸ್ ಅಕಾಡೆಮಿಯ ಸ೦ಚಾಲಕ ಗೋಪಾಲ ಚ೦ದನ್, ಅಳಿಕೆ ಸತ್ಯಸಾಯಿ ಲೋಕಸೇವಾ ಫ್ರೌಢಶಾಲೆಯ  ಮುಖ್ಯೋಪಧ್ಯಾಯ ರಘು, ಮ೦ಗಳೂರು ಎಲ್ ಐ ಸಿ ವಿಭಾಗದ ಸುರೇಶ, ಮನೋಹರ,ಶ್ರೀಮತಿ ಗುಣವತಿ ಸುಧಾಕರ,ರಮೇಶ ಯು,ಗ೦ಗೊಳ್ಳಿಯ  ಡಾ ಬಿ.ಆರ್ ಅ೦ಬೇಡ್ಕರ್ ಯುವಕ ಮ೦ಡಲದ ಸ್ಥಾಪಕಾದ್ಯಕ್ಷ ಭಾಸ್ಕರ ಎಚ್ ಜಿ ಮೊದಲಾದವರು ಉಪಸ್ಥಿತರಿದ್ದರು.ವಿಠಲ ಮಾಸ್ತರ ಪಡುಬಿದ್ರಿ ಕಾರ‍್ಯಕ್ರಮ ನಿರೂಪಿಸಿದರು. ಸತೀಶ ಜಿ.  ಗ೦ಗೊಳ್ಳಿ ವ೦ದಿಸಿದರು.
                             ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com