ಎಸ್.ಡಿ.ಸಿ.ಸಿ ಬ್ಯಾಂಕ್ ಹುಣ್ಸೆಮಕ್ಕಿ ಖಾಖೆ ಉದ್ಘಾಟನೆ

ಕುಂದಾಪುರ: ಗ್ರಾಹಕರು ಬ್ಯಾಂಕ್‌ನ ಆಸ್ತಿ. ಇಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ದೇಶದಲ್ಲಿಯೇ ಪ್ರಥಮ ಸ್ಥಾನಿಯಾಗಲು ಗ್ರಾಹಕರೇ ಮುಖ್ಯ ಕಾರಣ. ದೇಶದಲ್ಲಿಯೇ ಪ್ರಥಮವಾಗಿ ಆಧುನಿಕ ತಂತ್ರಜ್ಞಾನವನ್ನು ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಬಳಸಿ ಗ್ರಾಹಕರಿಗೆ ಹೆಚ್ಚಿನ ಸೇವೆ ನೀಡುವಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಮುಂಚೂಣಿಯ ಹೆಜ್ಜೆ ಇಟ್ಟಿದ್ದು, ದೇಶದಲ್ಲಿ ಮೊದಲ ಬಾರಿಗೆ ರೂಪೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ನ್ನು ಸುಮಾರು 90 ಸಾವಿರ ಕೃಷಿಕರಿಗೆ ನೀಡಲಾಗುತ್ತಿದೆ. ಬ್ಯಾಂಕ್‌ನ ಗ್ರಾಹಕರು ಸ್ವಾವಲಂಬಿಗಳಾಗಿ ಅಭಿವೃದ್ಧಿ ಆಗುವುದರೊಂದಿಗೆ ಗ್ರಾಮವೂ ಅಭಿವೃದ್ಧಿಗೊಳ್ಳಬೇಕು ಎನ್ನುವ ತತ್ವದೊಂದಿಗೆ ಬ್ಯಾಂಕ್‌ ನಿರಂತರ ಕೆಲಸ ಮಾಡುತ್ತಿದೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಹೇಳಿದರು.
     ಅವರು ಕುಂದಾಪುರ ತಾಲೂಕು ಹುಣ್ಸೆಮಕ್ಕಿ ಶ್ರೀ ಮಹಾಮಾಯಿ ಸಂಕೀರ್ಣದಲ್ಲಿ ನೂತನವಾಗಿ ಆರಂಭವಾದ ಎಸ್‌ಸಿಡಿಸಿ ಬ್ಯಾಂಕ್‌ನ 93ನೇ ಶಾಖೆಯ ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

   ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ ಬಿದ್ಕಲ್‌ಕಟ್ಟೆ ಅಧ್ಯಕ್ಷ ಮಹೇಶ್‌ ಹೆಗ್ಡೆ ಬ್ಯಾಂಕ್‌ನ ಗಣಕೀಕರಣ ಉದ್ಘಾಟಿಸಿದರು. ಜಿ.ಪಂ. ಸದಸ್ಯ ರಶ್ವತ್‌ ಕುಮಾರ್‌ ಶೆಟ್ಟಿ ಭದ್ರತಾ ಕೋಶ‌ ಉದ್ಘಾಟಿಸಿದರು.

ತಾ.ಪಂ. ಸದಸ್ಯರಾದ ಪ್ರದೀಪ್‌ಚಂದ್ರ ಶೆಟ್ಟಿ, ರಮೇಶ್‌ ಶೆಟ್ಟಿ, ಹೊಂಬಾಡಿ ಮಂಡಾಡಿ ಗ್ರಾ.ಪಂ. ಅಧ್ಯಕ್ಷೆ ಶಾಂತಾ ಎ.ಎನ್‌., ಕಟ್ಟಡದ ಮಾಲಕ ಎಚ್‌. ಜಗದೀಶ್‌ ಪ್ರಭು, ಕುಂದಾಪುರ ಭೂ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ ಕೆ. ದಿನಕರ ಶೆಟ್ಟಿ, ಎ.ಪಿಎಂ.ಸಿ. ಅಧ್ಯಕ್ಷ ಬಾಂಡ್ಯ ಸುಧಾಕರ ಶೆಟ್ಟಿ, ಕುಂದಾಪುರ ವಿಎಸ್‌ಎಸ್‌ ಬ್ಯಾಂಕ್‌ ಅಧ್ಯಕ್ಷ ಮಧುಕರ್‌, ಬಸೂÅರು ವ್ಯ.ಸೇ. ಸಹಕಾರಿ ಸಂಘ ಅಧ್ಯಕ್ಷ ಗೋಪಾಲ ಪೂಜಾರಿ, ಸೀತಾರಾಮ ಶೆಟ್ಟಿ, ಬ್ಯಾಂಕ್‌ನ ನಿರ್ದೇಶಕರಾದ ಬಿ. ರಘುರಾಮ ಶೆಟ್ಟಿ, ಕೆ. ಕಿಶನ್‌ ಹೆಗ್ಡೆ ಕೊಳ್ಕೆಬೈಲ್‌ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭ ಗ್ರಾಹಕರಿಗೆ ಪ್ರಥಮ ಸಂಚಯ ಖಾತೆ, ಪ್ರಥಮ ಠೇವಣಿ ಪತ್ರ, ವಾಹನ ಸಾಲ, ಲಾಕರ್‌ ಕೀ ವಿತರಿಸಲಾಯಿತು. ನವೋದಯ ಸ್ವಸಹಾಯ ಗುಂಪುಗಳಿಗೆ ದಾಖಲಾತಿ ಪುಸ್ತಕ ಹಸ್ತಾಂತರಿಸಲಾಯಿತು. ಸಂಚಯ ಖಾತೆ ಮತ್ತು ನಿರಖು ಠೇವಣಿ ಇರಿಸಿದವರಿಗೆ ಏರ್ಪಡಿಸಿದ್ದ ಅದಷ್ಟ ಬಹುಮಾನ ಯೋಜನೆ ಡ್ರಾ ನಡೆಸಲಾಯಿತು. ಚೈತನ್ಯ ಆರೋಗ್ಯ ಪರಿಹಾರ ನಿಧಿ ಚೆಕ್‌ನ್ನು ವಿತರಿಸಲಾಯಿತು. ನವೋದಯ ಮೇಲ್ವಿಚಾರಕರು, ಪ್ರೇರಕರನ್ನು ಗೌರವಿಸಲಾಯಿತು. ಕಟ್ಟಡದ ಮಾಲಕ ಎಚ್‌. ಜಗದೀಶ್‌ ಪ್ರಭು, ಶಾಖಾ ವ್ಯವಸ್ಥಾಪಕ ಬಿ.ಜಿ. ಜೀವನ್‌ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ರಾಜು ಪೂಜಾರಿ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಬಾಬು ಬಿಲ್ಲವ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com