ಕಲಾವಿದರ ಕೊಡುಗೆ ಮರೆಯಲಾಗದ್ದು: ಯು.ಸಿ. ಹೊಳ್ಳ

      ಮರವಂತೆ ಕಲಾವಿದರು ಒಂದು ಸಮುದಾಯದ ಸಾಂಸ್ಕೃತಿಕ ಪರಂಪರೆಯ ಕೊಂಡಿಗಳಿದ್ದಂತೆ. ಅವರ ಜೀವಿತಾವಧಿಯಲ್ಲಿ ಆ ಪರಂಪರೆಗೆ ಅವರಿಂದ ವಿಶೇಷ ಕೊಡುಗೆ ಸಂದಿರುತ್ತದೆ. ಅದರೆದುರು  ಅವರು ಸಮುದಾಯದಿಂದ ಪಡೆದಿರುವುದು ಕ್ಷುಲ್ಲಕವೆನಿಸುತ್ತದೆ. ಆದುದರಿಂದ ಸಮಾಜ ಅವರ ಕೊಡುಗೆಗಳನ್ನು ಮರೆಯಬಾರದು ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಯು. ಚಂದ್ರಶೇಖರ ಹೊಳ್ಳ ಹೇಳಿದರು. 
     ಮರಂತೆಯ ದಾಸ ಯಕ್ಷಗಾನ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ  ಅಲ್ಲಿನ ಸಾಧನಾ ಸಮುದಾಯ ಭವನದ ವಿ. ಕೆ. ಕಾಮತ್ ಸಭಾಗೃಹದಲ್ಲಿ ನಡೆದ ಯಕ್ಷಗಾನ ಭಾಗವತ ನರಸಿಂಹ ದಾಸ ಮತ್ತು ಶ್ರೀನಿವಾಸ ದಾಸ ಅವರ ಸಂಸ್ಮರಣೆ ಮತ್ತು ಕಲಾ ಗೌರವ ಪ್ರದಾನ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಟ್ರಸ್ಟ್‌ನ ಅಧ್ಯಕ್ಷ ಮಂಜುನಾಥ ಎನ್. ದಾಸ್ ಅಧ್ಯಕ್ಷತೆ ವಹಿಸಿದ್ದರು. 
      ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಉಪನ್ಯಾಸಕಿ ಡಾ. ಶುಭಾ ಮರವಂತೆ ಅವರು ಹೊರತಂದಿರುವ ಮರವಂತೆ ವರಾಹ ದೇವಸ್ಥಾನದ ಪರಿಚಯ ಪುಸ್ತಕವನ್ನು ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮತ್ತು ದೇವರ ಭಕ್ತಿಗೀತೆಗಳ ಸಿಡಿಯನ್ನು ಆ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ. ರಾಮಚಂದ್ರ ಹೆಬ್ಬಾರ್ ಬಿಡುಗಡೆಗೊಳಿಸಿದರು. 
    ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ  ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ, ಬಸ್ರೂರು ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಕನರಾಡಿ ವಾದಿರಾಜ ಭಟ್, ನಾಗೂರಿನ ಸಂದೀಪನ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಿ. ವಿಶ್ವೇಶ್ವರ ಅಡಿಗ ಮುಖ್ಯ ಅತಿಥಿಗಳಾಗಿದ್ದರು. 
ದಾಸ ಭಾಗವತ ಸಂಸ್ಮರಣ ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಭಾಗವತ ಸಿದ್ಧಾಪುರ ಸಬಡಬಾಳದ ವಿಶ್ವೇಶ್ವರ ಸೋಮಯಾಜಿ ಅವರಿಗೆ ಕಲಾ ಗೌರವ ಸಲ್ಲಿಸಲಾಯಿತು.
     ಪ್ರಗತಿ ಮಾಧವ ಸ್ವಾಗತಿಸಿದರು. ಪಲ್ಲವಿ ವಂದಿಸಿದರು. ಯಶೋಧಾ ಪ್ರಕಾಶ್ ಸನ್ಮಾನ ಪತ್ರ ವಾಚಿಸಿದರು. ಡಾ. ಶುಭಾ ಮರವಂತೆ ನಿರೂಪಿಸಿದರು. ಮಹಿಳಾ ಕಲಾವಿದರು ಭಾಗವತ ಮರವಂತೆ ದೇವರಾಜ ದಾಸ್ ನಿರ್ದೇಶನದ ’ಕಂಸವಧೆ’ ಪ್ರಸಂಗ ಪ್ರದರ್ಶಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com