ದೇಹದಾಡ್ಯ ಸ್ಪರ್ಧೆ: ಮಿಸ್ಟರ್‌ ಕುಂದಾಪುರ-2015

ಕುಂದಾಪುರ: ನ್ಯೂ ಹರ್ಕುಲೆಸ್‌ ಜಿಮ್‌ ಮತ್ತು ಫಿಟ್‌ನೆಸ್‌ ಸೆಂಟರ್‌ ಕುಂದಾಪುರ ಇವರ ಆಶ್ರಯದಲ್ಲಿ ಕುಂದಾಪುರದ ಕಲಾಮಂದಿರದಲ್ಲಿ  4ನೇ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಅಂತರ್‌ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಜರುಗಿತು.

ಮಂಗಳೂರಿನ ರಮೇಶ್‌ ಮಿಸ್ಟರ್‌ ಕುಂದಾಪುರ-2015 ಪ್ರಶಸ್ತಿ ಪಡೆದರು. ಉತ್ತಮ ಮಸ್ಕಾಲರ್‌ ಪ್ರಶಸ್ತಿ ಉಡುಪಿ ಆನಂದ ಸುವರ್ಣ ಪಡೆದರು. ಇಂಡಿಯನ್‌ ಪವರ್‌ ಲಿಫ್ಟಿಂಗ್‌ ಅಸೋಸಿಯೇಶನ್‌ ಏಕಲವ್ಯ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ವಿತರಿಸಿದರು.

ಈ ಸಂದರ್ಭದಲ್ಲಿ ಮರವಂತೆ ಗ್ರಾ.ಪಂ.ಸದಸ್ಯ ಮನ್ಸೂರ್‌ ಇಬ್ರಾಹಿಂ, ಗಂಗೊಳ್ಳಿ  ಗ್ರಾ.ಪಂ. ಸದಸ್ಯ ಮುಜಾಹಿದ್‌, ಪತ್ರಕರ್ತ ಯು.ಎಸ್‌. ಶೆಣೈ, ವಿ.ವಿ. ಮಟ್ಟದ  ವಾಲಿಬಾಲ್‌ಮಾಜಿ ಆಟಗಾರ ಪ್ರದೀಪ್‌ ಕುಮಾರ್‌ ಶೆಟ್ಟಿ, ನ್ಯೂ ಹರ್ಕ್ಯೂಲಸ್‌ ಜಿಮ್‌ನ ವ್ಯವಸ್ಥಾಪಕ ಸತೀಶ್‌ ಖಾರ್ವಿ, ಬಾಡಿಬಿಲ್ಡರ್ ಅಸೋಸಿಯೇಶನ್‌ ಅಧ್ಯಕ್ಷ ಗೋವರ್ಧನ ಬಂಗೇರಾ, ಕಾರ್ಯದರ್ಶಿ ಶಿವಕುಮಾರ್‌, ಕಾರ್ಯದರ್ಶಿ ಅಜಿತ್‌ ಪೂಜಾರಿ ಉಪಸ್ಥಿತರಿದ್ದರು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com