22ಕ್ಕೆ ಏಕಪವಿತ್ರ ನಾಗಮಂಡಲ

ಕುಂದಾಪುರ: ತಾಲೂಕು ಮೊಳಹಳ್ಳಿ ಗ್ರಾಮದ ಬಾಗಳಕಟ್ಟೆ ಕುಟುಂಬಿಕರ ಮೂಲ ನಾಗ ಬನದಲ್ಲಿ ಹರಕೆಯ ಏಕಪವಿತ್ರ ನಾಗಮಂಡಲೋತ್ಸವ ಮಾರ್ಚ್ 22ರಂದು ನಡೆಯದೆ.
      ನೂರು ವರ್ಷಗಳ ಹಿಂದೆ ಈ ಕುಟುಂಬದ ವತಿಯಿಂದ ನಾಗಮಂಡಲ ಮಾಡಲಾಗಿತ್ತು. ಬಾಕಿ ಹರಕೆಯ ಸಂಪೂರ್ಣತೆಗಾಗಿ ಇದೀಗ ಮತ್ತೊಮ್ಮೆ ನಾಗಮಂಡಲ ಮಾಡಲಾಗುತ್ತಿದೆ. ಸುಸಜ್ಜಿತ ಅನ್ನ ಚಪ್ಪರ, ಸುಮಾರು 1500 ಜನ ಒಟ್ಟಿಗೆ ಕುಳಿತು ಊಟ ಮಾಡಬಹುದಾದ ಊಟದ ಚಪ್ಪರ ಹಾಗೂ ಸುಂದರ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. 15000 ಜನ ಪ್ರಸಾದ ಸ್ವೀಕರಿಸುವ ನಿರೀಕ್ಷೆ ಇದ್ದು, ಅದಕ್ಕಾಗಿ ಸಂಪೂರ್ಣ ವ್ಯವಸ್ಥೆ ಮಾಡಲಾಗುತ್ತಿದೆ.
     ಬಿ.ಅಪ್ಪಣ್ಣ ಹೆಗ್ಡೆಯವರ ಅದ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಕಾಡಿನಕೊಂಡ ಎನ್.ಕಷ್ಣಮೂರ್ತಿ ಪುರಾಣಿಕರ ನೇತೃತ್ವದಲ್ಲಿ, ಕ್ಷೇತ್ರ ಪುರೋಹಿತರಾದ ನಾಗೇಶ್ ಉಡುಪ ಇವರ ನೇತೃತ್ವದಲ್ಲಿ ವೇದಮೂರ್ತಿ ಅಂಪಾರು ರವಿರಾಜ ಭಟ್ಟ ಹಾಗೂ ಅಂಪಾರು ಸರ್ವೊತ್ತಮ ವೈದ್ಯ ಮತ್ತು ಬಳಗದವರಿಂದ ನಾಗಮಂಡಲೋತ್ಸವ ನಡೆಯಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ವಿಠಲ ಶೆಟ್ಟಿ  ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com