ರಾಜರ್ಷಿ ಡಾ| ವೀರೇಂದ್ರ ಹೆಗ್ಗಡೆ ಅವರಿಗೆ ಸಮ್ಮಾನ

ಕುಂದಾಪುರ: ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರಿಗೆ  ಕೇಂದ್ರ ಸರಕಾರವು  ಪದ್ಮವಿಭೂಷಣ ಪ್ರಶಸ್ತಿ ಕೊಡ ಮಾಡಿದ ಪ್ರಯುಕ್ತ ಅಖೀಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾದ ವತಿಯಿಂದ ಭಾರತದಾದ್ಯಂತ ನೆಲೆಸಿರುವ ಕೊಂಕಣಿ ಖಾರ್ವಿ ಸಮಾಜದವರಿಂದ ಮಾ. 2ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನ ದಲ್ಲಿ  ಮಹಾಜನ ಸಭಾದ ವತಿಯಿಂದ ಸಮ್ಮಾನಿಸಿದರು.
      ಅಧ್ಯಕ್ಷ ಕೆ.ಬಿ. ಖಾರ್ವಿ, ಹಿರಿಯ ಉಪಾಧ್ಯಕ್ಷ ಮೋಹನ್‌ ಬನಾವಳಿಕರ್‌, ಪ್ರಧಾನ ಕಾರ್ಯದರ್ಶಿ ಉಮಾನಾಥ್‌ ಗಂಗೊಳ್ಳಿ, ಕೋಶಾಧಿಧಿಕಾರಿ ಪುರುಷೋತ್ತಮ ಆರ್ಕಾಟಿ, ಉಪಾಧ್ಯಕ್ಷರಾದ ಗಣಪತಿ ಬನಾವಳಿಕರ್‌, ತಿಮ್ಮಪ್ಪ ಖಾರ್ವಿ, ಬಾಬು ಎ.ಖಾರ್ವಿ, ಸೂರ್ಯಕಾಂತ ಸಾರಂಗ, ದೇವಪ್ಪ ತಾಂಡೇಲ,  ವಸಂತ ಖಾರ್ವಿ, ನರಸಿಂಹ ಖಾರ್ವಿ, ಸುಭಾಷ ಪಠೇಲ, ಕೇಂದ್ರ ಕಾರ್ಯದರ್ಶಿ ದಿನಕರ ಖಾರ್ವಿ ಶೃದ್ಧಾ  ಉಪಸ್ಥಿತರಿದ್ದರು.

ಮಹಾಜನ ಸಭಾದ ಅಧ್ಯಕ್ಷ ಕೆ.ಬಿ.ಖಾರ್ವಿ ಸ್ವಾಗತಿಸಿ, ಭಾರತದ ವಿವಿಧ ಪ್ರದೇಶಗಳಿಂದ ಸಮಾಜದವರ ಪಟ್ಟಿಯನ್ನು ಓದಿದರು.  

ಮಹಾಸಭಾದ ಪ್ರಧಾನ ಕಾರ್ಯದರ್ಶಿ ಉಮಾನಾಥ್‌ ಗಂಗೊಳ್ಳಿ ಪೂಜ್ಯರಿಗೆ ಕೊಡ ಮಾಡಿದ ಪದ್ಮವಿಭೂಷಣ ಪ್ರಶಸ್ತಿ ಭಾರತದಾದ್ಯಂತ ನೆಲೆಸಿರುವ ಸಮಸ್ತ ಕೊಂಕಣಿ ಖಾರ್ವಿ ಸಮಾಜದವರಿಗೆ ಸಿಕ್ಕಿದ ಪ್ರಶಸ್ತಿಯೆಂದು ಬಗೆದು ಶ್ರೀ ಕ್ಷೇತ್ರದ ಕೊಂಕಣಿ ಖಾರ್ವಿ ಭಕ್ತರು ಸಂತಸಗೊಂಡು  ಪ್ರಪ್ರಥಮವಾಗಿ ಅಖೀಲ ಭಾರತ ಮಟ್ಟದಲ್ಲಿ ಮಹಾಜನ ಸಭಾದ ಆಶ್ರಯದಲ್ಲಿ ಒಟ್ಟುಗೂಡಿ ಶ್ರೀ ಕ್ಷೇತ್ರಕ್ಕೆ ಆಗಮಿಸಿರುವುದಾಗಿ ತಿಳಿಸಿದರು. 

ಕಾರ್ಯದರ್ಶಿ ಕೃಷ್ಣ ಎಚ್‌.ತಾಂಡೇಲ ಅವರು ಬಿನ್ನವತ್ತಳಿಕೆಯನ್ನು ವಾಚಿಸಿದರು.   ಸಮ್ಮಾನಕ್ಕೆ ಉತ್ತರಿಸಿದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಕೊಂಕಣಿ ಖಾರ್ವಿ ಸಮುದಾಯದವರು ತಲ ತಲಾಂತರದಿಂದ ಶ್ರೀ ಕ್ಷೇತ್ರದ ಭಕ್ತರಾಗಿದ್ದು, ಶ್ರೀ ಕ್ಷೇತ್ರದಲ್ಲಿ ಜರಗುವ ಎಲ್ಲ ಕಾರ್ಯಕ್ರಮಗಳಲ್ಲಿ  ತಪ್ಪದೇ ಭಾಗವಹಿಸುತ್ತಿದ್ದಾರೆ ಎಂದರು
ಅಖೀಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾದವರು ಕುಂದಾಪುರದ ತ್ರಾಸಿಯಲ್ಲಿ ನಿರ್ಮಿಸುತ್ತಿರುವ ಸಮು ದಾಯ, ಶೆ„ಕ್ಷಣಿಕ ಮತ್ತು ಸಾಂಸ್ಕೃ ತಿಕ ಭವನದ ಮನವಿ ಅಧ್ಯಕ್ಷರಿಂದ ಸ್ವೀಕರಿಸಿರುವುದಾಗಿ ತಿಳಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com