ಕುಂದಾಪುರ ಪ್ರವೇಶಿಸಿದ ಶ್ರೀರಾಮನವಮಿ ರಥಯಾತ್ರೆ

ಕುಂದಾಪುರ: ಬೆಂಗಳೂರಿನ ರಾಮದಾಸ ಮಿಷನ್ ದಕ್ಷಿಣ ಕರ್ನಾಟಕದ ಹತ್ತು ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಶ್ರೀ ರಾಮನವಮಿ ರಥಯಾತ್ರೆ ಕುಂದಾಪುರ ಪ್ರವೇಶಿಸಿತು. ಕುಂದಾಪುರ ಮತ್ತು ಕೋಟೇಶ್ವರದಲ್ಲಿ ರಾಮಭಕ್ತರು ರಥವನ್ನು ಸ್ವಾಗತಿಸಿದರು.
     ರಥಯಾತ್ರೆಯ ನೇತತ್ವ ವಹಿಸಿರುವ ಸ್ವಾಮಿ ಸತ್ಯಾನಂದ ಸರಸ್ವತಿ ಪೌಂಡೇಶನ್‌ನ ಶ್ರೀ ಶಕ್ತಿ ಶಾಂತಾನಂದ ಮಹರ್ಷಿ ಮಾತನಾಡಿ, ರಾಮರಾಜ್ಯದ ಪರಿಕಲ್ಪನೆ ಸಾಧಿಸಲು ರಥಯಾತ್ರೆ ನಡೆಸಲಾಗುತ್ತಿದೆ. ಮಾ.9ರಂದು ಕೊಲ್ಲೂರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ ರಥ ಹೊರಟಿದೆ.  ಈ ಬಾರಿ ಶ್ರೀ ರಾಮನವಮಿ ರಥಯಾತ್ರೆ ಉಡುಪಿ, ಮಂಗಳೂರು, ಶಿವಮೊಗ್ಗ, ತುಮಕೂರು, ಚಿಕ್ಕಮಂಗಳೂರು, ಹಾಸನ, ಮೈಸೂರು, ಮಂಡ್ಯ, ರಾಮನಗರ ಮತ್ತು ಬೆಂಗಳೂರು ಜಿಲ್ಲೆ ಸೇರಿದಂತೆ  ಕರ್ನಾಟಕ ಹತ್ತು ಜಿಲ್ಲೆ ಪ್ರವೇಶಿಸಿ ದೈವಿಕ ಜಾಗತಿ ಪ್ರಜ್ಞೆ ಮೂಡಿಸಿ ನಾಮಕ್ಕಲ್ ನಿಂದ ಕನ್ಯಾಕುಮಾರಿಗೆ ತಲುಪಿ. ಮಾ.28ರಂದು ಕನ್ಯಾಕುಮಾರಿಯಲ್ಲಿ ಸಮ್ಮೇಳನದೊಂದಿಗೆ ಕೊನೆಗೊಳ್ಳಲಿದೆ ಎಂದರು. 
  ಪರಶುರಾಮ ಸೇನೆಯ ಹರೀಶ್ ತೋಳಾರ್ ಕೊಲ್ಲೂರು, ಗೋಪಾಡಿ ಗೋರಕ್ಷಾ ಸಮಿತಿಯ ಪ್ರಮುಖ ಗಿರೀಶ್ ಉಪಾಧ್ಯಾಯ, ಸ್ಥಳೀಯರಾದ ಪದ್ಮನಾಭ ಭಟ್ ಇನ್ನಿತರರು ಇದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com