ರಂಗಭೂಮಿ ಸಮರ್ಥ ಅಭಿವ್ಯಕ್ತಿ ಮಾಧ್ಯಮ: ಜಾನ್ ಡಿಸೋಜ

ಬೈಂದೂರು: ಮನುಷ್ಯನ ಸಂಘ ಜೀವನ ಹಾಗೂ ಸಂಸ್ಕೃತಿ ರೂಪುಗೊಳ್ಳುವುದರ ಜೊತೆಗೆ ನೋವು-ನಲಿವು, ತಲ್ಲಣಗಳ ಅಭಿವ್ಯಕ್ತಿಗೆ ರಂಗಭೂಮಿ ಹುಟ್ಟಿಕೊಂಡಿತು. ಇಂದು ರಂಗಭೂಮಿ ಈಗ ಒಂದು ಉತ್ಕೃಷ್ಟ ಪ್ರದರ್ಶನ ಕಲೆಯಾಗಿ ಪರಿಪೂರ್ಣತೆ ಸಾಧಿಸಿದೆ. ಮನೋರಂಜನೆಯ ಜತೆಗೆ ಸಮಾಜದ ಓರೆಕೊರೆಗಳನ್ನು ತಿದ್ದುವ ಶಿಕ್ಷಣ ಮಾಧ್ಯಮವಾಗಿಯೂ ರೂಪುಗೊಂಡಿದೆ ಎಂದು ಹಿರಿಯ ಪತ್ರಕರ್ತ ಜಾನ್ ಡಿಸೋಜ ಹೇಳಿದರು.
   ಅವರು ಉಪ್ಪುಂದದ ರಂಗಸ್ಥಳ, ಜೇಸಿ‌ಐ ಮತ್ತು ಬೈಂದೂರಿನ ಸುರಭಿ ಸಂಯುಕ್ತವಾಗಿ ಉಪ್ಪುಂದದ ಮಾತೃಶ್ರೀ ಸಭಾಭವನದಲ್ಲಿ ಏರ್ಪಡಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. 
   ಕಾರ್ಯಕ್ರಮದಲ್ಲಿ ಹಿರಿಯ ರಂಗಕಲಾವಿದ ಯು. ಎಚ್. ರಾಜರಾಮ ಭಟ್‌ರನ್ನು ಸನ್ಮಾನಿಸಲಾಯಿತು. ಜೇಸಿ‌ಐ ಅಧ್ಯಕ್ಷ ಸುಬ್ರಹ್ಮಣ್ಯ ಜಿ ಅಧ್ಯಕ್ಷತೆ ವಹಿಸಿದ್ದರು. ಮಾನವ ಹಕ್ಕು ಜನಜಾಗೃತಿ ಸಮಿತಿಯ ಅಧ್ಯಕ್ಷ ನವೀನಚಂದ್ರ ಉಪ್ಪುಂದ ವಿಶೇಷ ಅತಿಥಿಯಾಗಿ ಉಪಸ್ಥಿತರಿದ್ದರು. 
    ರಂಗಸ್ಥಳದ ಅಧ್ಯಕ್ಷ ರಾಮಕೃಷ್ಣ ದೇವಾಡಿಗ ಸ್ವಾಗತಿಸಿ, ಪ್ರಸ್ತಾವನೆಗೈದರು. ಜೇಸಿ‌ಐ ಸ್ಥಾಪಕಾಧ್ಯಕ್ಷ ದಿವಾಕರ ಶೆಟ್ಟಿ, ಗ್ರಾಪಂ ಸದಸ್ಯ ಯು. ಎ. ಮಂಜು ದೇವಾಡಿಗ, ಸುರಭಿಯ ಸಂಚಾಲಕ ಸುಧಾಕರ ಪಿ. ಬೈಂದೂರು ಶುಭಹಾರೈಸಿದರು. ಜೈರಾಜ್ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com