ಡಾ| ಶಿವರಾಮ ಕಾರಂತ ಉತ್ಸವ ಅಭಿಯಾನ

ಕುಂದಾಪುರ: ಯಕ್ಷಗಾನ  ಒಂದು ಪರಿಪೂರ್ಣ ಕಲೆ. ಈ ಕಲೆಯ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ವಹಿಸಿ ಅಧ್ಯಯನ ಶೀಲರೂ ಆಸ್ಪಾದಕರೂ ಆದಾಗ ಮಾತ್ರ ಈ ಕಲೆ ಬೆಳೆಯುತ್ತದೆ. ಕನ್ನಡದ ಮೇರು ಸಾಹಿತಿ ಡಾ|ಶಿವರಾಮ ಕಾರಂತರ ಬ್ಯಾಲೆಗಳನ್ನು ಪುನರಪಿ ನೆನಪಿಸುವ ಕರ್ನಾಟಕ ಕಲಾದರ್ಶಿನಿಯವರ ಪ್ರಯತ್ನ ಸ್ತುತ್ಯರ್ಹ ಎಂದು ಅಕಾಡೆಮಿ ಆಪ್‌ ಜನರಲ್‌ ಎಜುಕೇಶನ್‌ನ  ಆಡಳಿತಾಧಿಕಾರಿ ಡಾ|ಎಚ್‌.ಶಾಂತಾರಾಮ್‌ ಹೇಳಿದರು.

ಅವರು ಭಂಡಾರ್‌ಕಾರ್ಸ್‌ ಕಾಲೇಜಿನ ರಂಗ ಅಧ್ಯಯನ ಕೇಂದ್ರದಲ್ಲಿ   ಬೆಂಗಳೂರಿನ ಕರ್ನಾಟಕ ಕಲಾದರ್ಶಿನಿ ಹಾಗೂ ರಂಗ ಅಧ್ಯಯನ ಕೇಂದ್ರ ಇವರ ಸಹಯೋಗದಲ್ಲಿ  ಡಾ| ಶಿವರಾಮ ಕಾರಂತ ಉತ್ಸವದ ಪ್ರಯುಕ್ತ ಕರ್ನಾಟಕ ಕಲಾದರ್ಶಿನಿ  ಅವರಿಂದ ನಡೆದ ಡಾ|ಕಾರಂತರ ಪಂಚವಟಿ ಬ್ಯಾಲೆ ನೃತ್ಯ ಪ್ರಕಾರದ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಬೆಂಗಳೂರಿನ ಕರ್ನಾಟಕ ಕಲಾದರ್ಶಿ ನಿಯ ನಿರ್ದೇಶಕ ಶ್ರೀನಿವಾಸ ಸಾಸ್ತಾನ  ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರಂತರ ಬ್ಯಾಲೆಗಳು ಹಾಗೂ ಉತ್ಸವದಲ್ಲಿ ರಾಜ್ಯಾದ್ಯಂತ ಹಮ್ಮಿಕೊಂಡ ಕಾರ್ಯಕ್ರಮಗಳು ಹಾಗೂ ಯಕ್ಷ ಕಲೆಗಳ ಅಳಿವು ಉಳಿವು, ವಿದ್ಯಾರ್ಥಿಗಳ ಪಾತ್ರ ಮುಂತಾದ ವಿಚಾರಗಳ  ಕುರಿತು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಪ್ರಾಧ್ಯಾಪಕ ನಾರಾಯಣ ತಂತ್ರಿ  ವಹಿಸಿದ್ದರು. ರಂಗ ಅಧ್ಯಯನ ಕೇಂದ್ರದ ಸಂಚಾಲಕ ವಸಂತ ಬನ್ನಾಡಿ  ಉಪಸ್ಥಿತರಿದ್ದರು. ಉಪನ್ಯಾಸಕ ಅರುಣಾಚಲ ಮಯ್ಯ ಸ್ವಾಗತಿಸಿದರು. ವಿನಾಯಕ್‌ ಕಾರ್ಯಕ್ರಮ ನಿರೂಪಿಸಿದರು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com