ಮುಸ್ಲಿಂ ಸಂಘಟನೆಗಳ ಸೌಹಾರ್ದ ಸಮಾವೇಶ ಉದ್ಘಾಟನೆ

ಕುಂದಾಪುರ:  ಬಂಟ್ವಾಳ ತಾಲೂಕಿನ ಮಾಣಿಯಲ್ಲಿನ ದಾರುಲ್‌ ಇರ್ಷಾದ್‌ ವಿದ್ಯಾಸಂಸ್ಥೆಯ ಬೆಳ್ಳಿ ಹಬ್ಬದ ಪ್ರಚಾರ ಸಮಾವೇಶ ಹಾಗೂ ಸೌಹಾರ್ದ ಸಂಗಮ ಸಮಾವೇಶ ಹಂಗಳೂರಿನ ಮಸೀದಿ ಮೈದಾನದಲ್ಲಿ ಜರಗಿತು. ಮಾಣಿ ವಿದ್ಯಾಸಂಸ್ಥೆಯ  ಪ್ರವರ್ತಕ ಶೈಖುನಾ ಮಾಣಿ ಉಸ್ತಾದ್‌  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ದಕ್ಷಿಣ ಭಾರತದ ಎಸ್‌ಎಸ್‌ಎಫ್‌ ಐನ ಅಧ್ಯಕ್ಷ ಎಂ.ಎಸ್‌. ಅಬ್ದುಲ್‌  ರಶೀದ್‌  ಝೆನ್ವಿ ಕಾಮಿಲ್‌ ಸಖಾಫಿ,  ಕುಂದಾಪುರ ಸರಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ|ಉದಯ ಶಂಕರ್‌ ಹಾಗೂ ಪತ್ರಕರ್ತ ಡಾ|ಸುಧಾಕರ ನಂಬಿಯಾರ್‌ ಉಪಸ್ಥಿತರಿದ್ದರು. ದಾರುಲ್‌ ಇರ್ಷಾದ್‌ ವಿದ್ಯಾಸಂಸ್ಥೆಯವತಿಯಿಂದ ಆರೋಗ್ಯ ಸಲಕರಣೆ, ಕುಂದಾಪುರದ ಶಾಸ್ತ್ರಿ ವೃತ್ತದಲ್ಲಿ  ಸಾರ್ವಜನಿಕರ ಉಪಯೋಗಕ್ಕಾಗಿ  ವಾಟರ್‌ ಕೂಲರ್‌ ಅಳವಡಿಸಲಾಯಿತು. ಟೈಲರಿಂಗ್‌ ಮಿಷನ್‌ಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.

ಬೆಳ್ಳಿ ಹಬ್ಬ ಸ್ವಾಗತ ಸಮಿತಿಯ ಅಧ್ಯಕ್ಷ ಕೆ.ಎಸ್‌.ಅಬ್ದುಲ್‌ ಹಮೀದ್‌ ಹಾಜೀ ಕೋಡಿ ಅಧ್ಯಕ್ಷತೆ ವಹಿಸಿದ್ದರು.

ಭಂಡಾರ್‌ಕಾರ್ ಕಾಲೇಜಿನ ಪ್ರಾದ್ಯಾಪಕ ಮಹಮ್ಮದ್‌ ಇಕ್ಬಾಲ್‌, ಮಹಮ್ಮದ್‌ ಶರೀಫ್‌ ಸಖಾಫಿ, ಅಬ್ದುಲ್‌ ರಶೀದ್‌ ಮದನಿ, ಉಡುಪಿ ಜಿಲ್ಲಾ ಎಸ್‌ವೈಎಸ್‌ ಅಧ್ಯಕ್ಷ ಅಸ್ಸಯ್ಯಿದ್‌ ಜ‌ಅ್ಫರ್‌ ಅಸ್ಸಖಾಫ್‌ ತಂಙಳ್‌, ಕೋಟೇಶ್ವರ, ಕರ್ನಾಟಕ ಎಸ್‌ಎಸ್‌ಎಫ್‌ ಉಪಾಧ್ಯಕ್ಷ ಅಬ್ದುಲ್‌ ರೆಹಮಾನ್‌ ಕಲ್ಕಟ್ಟಾ, ಮಹಮ್ಮದ್‌ ರಫೀಕ್‌ ಸಅದಿ, ಎಸ್‌ಜೆಎಂ ಕುಂದಾಪುರದ ಪ್ರ.ಕಾ.ಅಹಮದುಲ್‌ ಕಬೀರ್‌ ರಝಾ ಅಂಜದಿ ಹಂಗಳೂರು, ಎಸ್‌.ಜೆಎಂ ಅಧ್ಯಕ್ಷ ಅಬ್ದುರ್ರಹ್ಮಾನ್‌ ಸಖಾಫಿ, ಎಸ್‌ವೈಎಸ್‌ ನಾವುಂದ ಸೆಂಟರ್‌ ಅಧ್ಯಕ್ಷ ಹಾಜೀ ತೌಫೀಕ್‌ ಅಬ್ದುಲ್ಲ, ಎಸ್‌ಎಂಎ ಕುಂದಾಪುರ ಅಧ್ಯಕ್ಷ ಶಾಬಾನ್‌ ಎಹೆಚ್‌, ಎಸ್‌ಎಸ್‌ಎಫ್‌ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ ಇಲಿಯಾಸ್‌ ನಾವುಂದ, ಉಡುಪಿ ಜಿಲ್ಲಾ ಕಾರ್ಯದರ್ಶಿ ಅಬ್ದುರವೂಫ್‌ ಖಾನ್‌, ಉಪಸ್ಥಿತರಿದ್ದರು.
ಅಬ್ದುಲ್‌ ಸಲಾಂ ಚಿತ್ತೂರು ಕಾರ್ಯಕ್ರಮ ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com