ಸ್ವಾಗತ ಗೀತಾಂಜಲಿ ಧ್ವನಿಸುರುಳಿ ಬಿಡುಗಡೆ

ಕುಂದಾಪುರ:  ವಾಮಂಜೂರು ಸಂತ ರಾಯ್‌ಮಂಡ್ ಹೈಸ್ಕೂಲು ಅಧ್ಯಾಪಕ ರಾಂ ಎಲ್ಲಂಗಳ ಮತ್ತು ಬಾರಂದಾಡಿ ಶಾಲಾ ಸಹಶಿಕ್ಷಕ ಕೇಶವ ಶ್ಯಾನುಭೋಗ್ ಎಲ್ಲಂಗಳ ಅವರು ಶಾಲಾಮಕ್ಕಳಿಗಾಗಿ ಸಂಯೋಜಿಸಿದ ಚಲನಚಿತ್ರಾಧರಿತ ಸ್ವಾಗತಗೀತೆಗಳ ಧ್ವನಿಸುರುಳಿ "ಸ್ವಾಗತ ಗೀತಾಂಜಲಿ" ಬಿಡುಗಡೆ ಸಮಾರಂಭವು ಹೊಸಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಜರಗಿತು.
  
      ಮುಖ್ಯ ಅತಿಥಿ ಮಂಗಳೂರು ಆಕಾಶವಾಣಿ ಬಾಲವೃಂದ ವಿಭಾಗದ ನಿರ್ದೇಶಕ ಬಿ. ವಿ. ಶ್ರೀಧರ್ ಅವರು ಧ್ವನಿಸುರುಳಿ ಬಿಡುಗಡೆಗೊಳಿಸಿ ಮಾತನಾಡಿ ಶಿಕ್ಷಣ ಕ್ಷೇತ್ರಕ್ಕೆ ಹೊಸ ಪ್ರಯತ್ನಗಳು ಪ್ರಯೋಜನ ತರಲಿ ಎಂದು ಶುಭಹಾರೈಸಿದರು. ಧ್ವನಿಸುರುಳಿಯಲ್ಲಿ ಒಟ್ಟು ೧೨ ಹಾಡುಗಳಿದ್ದು, ಆಕಾಶವಾಣಿ ಕಲಾವಿದ, ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ಅವರು ಹಾಡಿದ್ದಾರೆ. ರಾಂ ಎಲ್ಲಂಗಳ ಅವರು ಗೀತರಚನೆ ಮಾಡಿದ್ದಾರೆ. ಬೈಂದೂರು ವಲಯದ ಆಯ್ದ ಶಾಲೆಗಳಿಗೆ ಉಚಿತವಾಗಿ ಹಂಚುವ ಉದ್ದೇಶದಿಂದ ಧ್ವನಿಸುರುಳಿ ಸಿದ್ಧಪಡಿಸಲಾಗಿದೆ ಎಂದು ಧ್ವನಿಸುರುಳಿ ಸಂಯೋಜಕ, ಕೇಶವ ಶ್ಯಾನುಭೋಗ್ ಎಲ್ಲಂಗಳ ಅವರು ಹೇಳಿದರು.
       ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ವೆಂಕಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು. ಸಿಆರ್‌ಪಿ ನಾರಾಯಣ ದೇವಾಡಿಗ, ಅಧ್ಯಾಪಕ ರಾಂ ಎಲ್ಲಂಗಳ, ಬಂಟ್ವಾಡಿ ನ್ಯೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ನಾಗೇಶ್ ಶ್ಯಾನುಭಾಗ್, ಶಿಕ್ಷಕರಾದ ಸಂತೋಷ್ ಖಾರ್ವಿ, ಸರಿಟಾ ಪಾಯಸ್, ಉಷಾ ಕಾರಂತ್ ಮೊದಲಾದವರು ಉಪಸ್ಥಿತರಿದ್ದರು. 
     ಮುಖ್ಯಶಿಕ್ಷಕಿ ಕಲ್ಯಾಣಿ ಅವರು ಸ್ವಾಗತಿಸಿದರು. ಚಂದ್ರ ಕೆ. ಹೆಮ್ಮಾಡಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಹೊಸಾಡು ಶಾಲಾ ಶಿಕ್ಷಕ ಜಯರಾಮ ಪಟಗಾರ್ ಅವರು ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com