ಅಧಿಕಾರಿಗಳ ಗೈರು: ತಾ.ಪಂ ಸಭೆಗೆ ಬಹಿಷ್ಕಾರ

ಕುಂದಾಪುರ:  ತಾಲೂಕು ಪಂಚಾಯತ್ ಸಾಮಾನ್ಯ ಸಭೆಗೆ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಹಾಜರಾಗದೇ ಇರುವುದರಿಂದ ತಾಲೂಕು ಪಂಚಾಯತ್ ಸದಸ್ಯರು ಸಭೆಯನ್ನು ಬಹಿಸ್ಕರಿಸಿ ಹೊರನಡೆದ ಘಟನೆ ಕುಂದಾಪುರ ತಾಲೂಕು ಪಂಚಾಯತಿಯಲ್ಲಿ ನಡೆಯಿತು

ನಿರಂತರಾಗಿ ಅಧಿಕಾರಿಗಳ ಗೈರು, ಸೆಕ್ಷನ್‌ 143ರ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ಈ ಎಲ್ಲವುಗಳು ಉಂಟುಮಾಡಿರುವ ಗೊಂದಲಗಳಿಗೆ ತೆರೆ ಎಳೆಯಬೇಕು. ಅಲ್ಲಿಯ ತನಕ ಸಭೆ ನಡೆಸುವ ಅಗತ್ಯವಿಲ್ಲ  ಎಂದು  ಸದಸ್ಯರು ಸಭೆ ಆರಂಭಗೊಳ್ಳುತ್ತಿದ್ದಂತೆ  ಬಹಿಷ್ಕರಿಸಿದರು.

ಜನವರಿ 9ರಂದು ನಡೆದ ತಾ.ಪಂ. ಸಭೆಯಲ್ಲಿ ಯೂ ಸಹ ಇದೇ ರೀತಿ  ಜಿಲ್ಲಾಧಿಕಾರಿಗಳು 143 ಸೆಕ್ಷನ್‌ನ ಬಗ್ಗೆ  ತಪ್ಪಾಗಿ ಸ್ಪಷ್ಟನೆಯನ್ನು ನೀಡಿದ ಕುರಿತು ಸದಸ್ಯರು ಸಭೆ ಬಹಿಷ್ಕರಿಸಿ ಹೊರನಡೆದಿದ್ದರು. 

  ಸಭೆಯ ಅಧ್ಯಕ್ಷತೆಯನ್ನು ತಾ.ಪಂ.ಅಧ್ಯಕ್ಷ  ಭಾಸ್ಕರ ಬಿಲ್ಲವ, ಉಪಾಧ್ಯಕ್ಷ ನಾಗೇಶ್‌ ಬೇಳೂರು, ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ನವೀನಚಂದ್ರ  ಶೆಟ್ಟಿ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಶೇಷಪ್ಪ ಉಪಸ್ಥಿತರಿದ್ದರು
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com