ತಲ್ಲೂರು ಕುಂತಿಯಮ್ಮ ದೇವಳ ರಾಜಗೋಪುರ ಸಮರ್ಪಣೆ

ತಲ್ಲೂರು: ಇಲ್ಲಿನ ಶ್ರೀ ಮಹಾದೇವಿ ಕುಂತಿ ಅಮ್ಮನವರ ದೇವಸ್ಥಾನದ ನೂತನ ಹೆಬ್ಟಾಗಿಲು, ಸುತ್ತುಪೌಳಿ ಮತ್ತು ರಾಜಗೋಪುರ‌ ಸಮರ್ಪಣೆ  ರವಿವಾರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.
   ಹಂಗಾರಕಟ್ಟೆಯ ಬಾಳೆಕುದ್ರು ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಅವರು ಹೆಬ್ಟಾಗಿಲು ಮತ್ತು ರಾಜಗೋಪುರವನ್ನು ಲೋಕಾರ್ಪಣೆಗೊಳಿಸಿದರು. ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡುತ್ತಾ ಜಗತ್ತಿನಲ್ಲಿ ಅಸುರೀ ಶಕ್ತಿಗಳನ್ನು ನಿವಾರಿಸಿ ಲೋಕಕ್ಕೆ ಶಾಂತಿ ನೆಮ್ಮದಿ ಕರುಣಿಸುತ್ತಲೇ ಬಂದಿರುವ ಆದಿಶಕ್ತಿ ಸಷ್ಟಿಯ ಮೂಲ. ತ್ರಿಶಕ್ತಸ್ವರೂಪಿಣಿಯ ಚೈತನ್ಯದೊಂದಿಗೆ ಭಕ್ತರ ಸಂಕಷ್ಟ ದೂರೀಕರಿಸುತ್ತಲೆ ಬಂದಿರುವ ತಲ್ಲೂರು ಮಹಾದೇವಿ ಕುಂತಿಯಮ್ಮ ದೇಗುಲ ಜಗತ್ಪ್ರಸಿದ್ಧಿಯಾಗಲಿ ಎಂದರು.
     ಮಾಜಿ ಸಚಿವ ಶ್ರೀನಿವಾಸ ಪೂಜಾರಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಬಿ.ಎಂ.ಸುಕುಮಾರ ಶೆಟ್ಟಿ, ಬೆಂಗಳೂರು ಬಿಬಿಎಂಪಿ ಸಹಾಯಕ ಆಯುಕ್ತೆ ಪೂರ್ಣಿಮಾ ಜಯತೀರ್ಥ ಮಾತನಾಡಿದರು. ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ, ಉದ್ಯಮಿ ಸುಂದರ ಶೆಟ್ಟಿ, ಉದ್ಯಮಿ ಟಿ.ಎನ್.ರಘುರಾಮ ಶೆಟ್ಟಿ ನಟ್ಟಿಬೈಲು, ಬೆಳಗಾವಿ ಉದ್ಯಮಿ ಶಂಕರ ಶೆಟ್ಟಿ, ಮುಂಬೈ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಡಿಜಿಎಂ ಕಿಶೋರ್ ಪಿ.ಆಚಾರ್ಯ, ತಲ್ಲೂರು ಕೋಣಿನಮನೆ ರತ್ನಾಕರ ಪೂಜಾರಿ, ನಿವತ್ತ ಅಧ್ಯಾಪಕ ಕೆ.ಶ್ರೀಧರ ಶೆಟ್ಟಿ, ಭವಾನಿ ಚಂದ್ರಶೇಖರ ಶೆಟ್ಟಿ, ಸರ್ವೋತ್ತಮ ಶೆಟ್ಟಿ, ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಟಿ.ಎನ್.ಹರೀಶ್ ಶೆಟ್ಟಿ, ಆಡಳಿತ ಮೊಕ್ತೇಸರ ಟಿ.ಎನ್.ಆನಂದ ಶೆಟ್ಟಿ, ಅರ್ಚಕ ಅನಂತ ಪುರುಷೋತ್ತಮ ಪಟವರ್ಧನ, ಉತ್ಸವ ಸಮಿತಿ ಅಧ್ಯಕ್ಷ ಟಿ.ಎನ್.ರಘುರಾಮ ಶೆಟ್ಟಿ, ತಲ್ಲೂರು ದೊಡ್ಮನೆ ವಸಂತ ಆರ್.ಹೆಗ್ಡೆ, ಸುಂದರಾಮ ಶೆಟ್ಟಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ದೇಗುಲದ ಜೀರ್ಣೋದ್ಧಾರಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು. 
    ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಟಿ.ಬಿ.ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳ ನ್ನಾಡಿದರು. ಕೆ.ಎಂ.ಉಮೇಶ್ ಮತ್ತು ದೇವರಾಜ್ ನಿರ್ವಹಿಸಿದರು. ಇದಕ್ಕೂ ಮೊದಲು ದೇವಾಲಯದಲ್ಲಿ ಲಕ್ಷ ಕುಂಕುಮಾರ್ಚನೆ ನಡೆಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com