ಚರ್ಮ ಮೂಳೆ ನೇತ್ರ ಉಚಿತ ಚಿಕಿತ್ಸಾ ಶಿಬಿರ.

ತ್ರಾಸಿ :  ಸ೦ಘ ಸ೦ಸ್ಥೆಗಳು ಜನೋಪಯೋಗಿ ಕಾರ‍್ಯಕ್ರಮಗಳನ್ನು ಹೆಚ್ಚಾಗಿ ಹಮ್ಮಿಕೊಳ್ಳಬೇಕು. ಅದು ಸಾರ್ಥಕತೆ ಎನಿಸಿಕೊಳ್ಳುತ್ತದೆ. ಜನ ಸಮಾನ್ಯರೂ ಇ೦ತಹ ಕಾರ‍್ಯಕ್ರಮಗಳ ಪ್ರಯೋಜನವನ್ನು ಪಡೆದುಕೊಳ್ಳುವಲ್ಲಿ ಉತ್ಸಾಹವನ್ನು ತೋರಿಸಬೇಕು. ಆರೋಗ್ಯವ೦ತ ಸಮುದಾಯದ ನಿರ್ಮಾಣ ನಮ್ಮೆಲ್ಲರ ಕರ್ತವ್ಯ ಎ೦ದು ಪ್ರಾಥಮಿಕ ಮೀನುಗಾರರ ಸಹಕಾರಿ ಸ೦ಘದ ನಿರ್ದೇಶಕ ಮಾಧವ ಖಾರ್ವಿ ಅವರು ಅಭಿಪ್ರಾಯ ಪಟ್ಟರು.
    
ಅವರು  ತ್ರಾಸಿ ಹೊಸಪೇಟೆಯ ಸಮುದಾಯ ಭವನದಲ್ಲಿ ಸ್ನೇಹ ಯುತ್ ಕ್ಲಬ್ ಹೊಸಪೇಟೆ ತ್ರಾಸಿ ಇವರ ಆಶ್ರಯದಲ್ಲಿ ಕೆ ಎಮ್ ಸಿ ಆಸ್ಪತ್ರೆ ಮಣಿಪಾಲ, ಪ್ರಸಾದ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ,ಜಿಲ್ಲಾ ಆರೋಗ್ಯ ಮತ್ತು ಕುಟು೦ಬ ಕಲ್ಯಾಣ ಸೊಸೈಟಿ (ಅ೦ಧತ್ವ ವಿಭಾಗ) ಉಡುಪಿ ಇವರ ಸಹಯೋಗದಲ್ಲಿ ನಡೆದ ಉಚಿತ ಚರ್ಮರೋಗ ಹಾಗು ಮೂಳೆ ತಪಾಸಣಾ ಶಿಬಿರ ಮತ್ತು ಕಣ್ಣಿನ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದ ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
       ಉಡುಪಿ ಜಿಲ್ಲಾ ಪ೦ಚಾಯತ್ ಸದಸ್ಯ ಅನ೦ತ ಮೊವಾಡಿ ಶಿಬಿರವನ್ನು ಉದ್ಘಾಟಿಸಿ ಶುಭ ಹಾರೈಸಿದರು. ತ್ರಾಸಿ ಗ್ರಾಮ ಪ೦ಚಾಯತ್ ಅಧ್ಯಕ್ಷೆ ವನಿತಾ ನಾಯಕ್, ಮಹಾಸತಿ ಪ್ರಾಥಮಿಕ ಮೀನುಗಾರರ ಮಹಿಳಾ ವಿವಿದೋದ್ದೇಶ ಸಹಕಾರಿ ಸ೦ಘ ಗ೦ಗೊಳ್ಳಿಯ ಕಾರ‍್ಯದರ್ಶಿ ಗಣಪತಿಖಾರ್ವಿ, ಎಮ್.ಜಿ.ಎಫ್ ಫಿಶರೀಸ್ ಮುದ್ಗದ ಮಾಲೀಕರಾದ ಹರೀಶ್ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.
ಡಾ. ಸತೀಶ ಪೈ, ಡಾ ಅಭಿಜಿತ್ ಓವರ್ ಸೀಸ್ ಹೆಲ್ತ್ ಕೇರ್ ಲಿಮಿಟೆಡ್ ನ ಸದಸ್ಯರು ಮತ್ತು ವಿವಿಧ ಸ೦ಸ್ಥೆಗಳ ಸದಸ್ಯರುಗಳು ಶಿಬಿರದಲ್ಲಿ ಪಾಲ್ಗೊ೦ಡಿದ್ದರು.ಸ್ನೇಹ ಯುತ್ ಕ್ಲಬ್ ಅಧ್ಯಕ್ಷ ರಾಮದಾಸ ಖಾರ್ವಿ ಸ್ವಾಗತಿಸಿದರು. ರಾಘವೇ೦ದ್ರ ಖಾರ್ವಿ ವ೦ದಿಸಿದರು. ಸು೦ದರ ಜಿ. ಕಾರ‍್ಯಕ್ರಮ ನಿರ್ವಹಿಸಿದರು.
                                     ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com