ವೈಜ್ಞಾನಿಕ ಹೈನುಗಾರಿಕಾ ಮಾಹಿತಿ ಶಿಬಿರ

ತ್ರಾಸಿ: ಜಗತ್ತಿನಲ್ಲಿ  ಹೈನುಗಾರಿಕೆಯಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ. ಆಧುನಿಕ ವಿಧಿ ವಿಧಾನಗಳೊಂದಿಗೆ  ಹೈನುಗಾರಿಕೆ ನಡೆಸ ಬೇಕಾದ ಅನಿವಾರ್ಯತೆ ಇರುವ ಇಂದಿನ ದಿನಗಳಲ್ಲಿ ಅನೇಕ ಹೊಸ ಅವಿಷ್ಕಾರಗಳಿಗೆ ಒಗ್ಗಿಕೊಂಡು ಹೈನುಗಾರಿಕೆಯಲ್ಲಿ ಮುಂದು ಹೋದರೆ ಯಶಸ್ಸು ಸಾಧ್ಯ ಎಂದು ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ  ಹೇಳಿದರು.

ಅವರು ತ್ರಾಸಿ ಅಣ್ಣಪ್ಪಯ್ಯ ಸಭಾಭವನ ದಲ್ಲಿ  ದ.ಕ. ಹಾಲು ಉತ್ಪಾದಕರ ಒಕ್ಕೂಟ  ಆಶ್ರಯದಲ್ಲಿ ರಾಷ್ಟ್ರಿಯ ಹೈನುಗಾರಿಕಾ ಯೋಜನೆಯ ಹಂತ 1ರ ಪ್ರಾಯೋಜಕತ್ವದಲ್ಲಿ ನಡೆದ ವೈಜ್ಞಾನಿಕ ಹೈನುಗಾರಿಕಾ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಒಕ್ಕೂಟ ಹೈನುಗಾರಿಕೆಗೆ  ಪ್ರೋತ್ಸಾಹ ನೀಡುತ್ತದೆ, ರೈತರ ಕಲ್ಯಾಣ  ಟ್ರಸ್ಟ್‌ ನಡಿ ವಿಶೇಷ ಪರಿಹಾರ ಒದಗಿಸುತ್ತಿದೆ. ಒಕ್ಕೂಟ ನಷ್ಠ ಭರಿಸಿಕೊಂಡು  ಹೈನುಗಾರರ ಪ್ರಗತಿಗೆ ಶ್ರಮಿಸುತ್ತಿದೆ ಎಂದರು.

ಹೆಮ್ಮಾಡಿ ಪಂಚಗಂಗಾ ರೈ.ಸೇವಾ ಸ.ಸಂ. ಅಧ್ಯಕ್ಷ ರಾಜು ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.  ಕೃಷಿ ಪಂಡಿತ ಪುರಸ್ಕೃತ  ತಮ್ಮಣ್ಣ  ಹೆಗ್ಡೆ, ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ  ಡಾ|ಸೂರ್ಯ  ನಾರಾಯಣ ಉಪಾಧ್ಯಾಯ ಮಾಹಿತಿ ನೀಡಿದರು.  
ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ|ಬಿ.ವಿ. ಸತ್ಯನಾರಾಯಣ  ಒಕ್ಕೂಟದ ನಿರ್ದೇಶಕ ಸೂರ್ಯ ಶೆಟ್ಟಿ ತೆಕ್ಕಟ್ಟೆ, ಜಾನಕಿ ಹಂದೆ ಡಾ|ನಿತ್ಯಾನಂದ ಉಪಸ್ಥಿತರಿದ್ದರು.

ಒಕ್ಕೂಟದ ನಿರ್ದೇಶಕ ಅಶೋಕ್‌ ಕುಮಾರ್‌ ಶೆಟ್ಟಿ ಸ್ವಾಗತಿಸಿ, ವಿಸ್ತರಣಾಧಿಕಾರಿ ಜಗದೀಶ ಕಾರ್ಯಕ್ರಮ ನಿರ್ವಹಿಸಿದರು.  ಶಿವಪ್ಪ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com