ಸಾಹಿತ್ಯ ಮನುಷ್ಯನ ಆನಂದಕ್ಕಾಗಿ. ಅನ್ನಕ್ಕಾಗಿ ಅಲ್ಲ: ಡಾ. ಮಾವಿನಕುಳಿ

ಸಾಲಿಗ್ರಾಮ: ಸಾಹಿತ್ಯ ಇರುವುದು ಮನುಷ್ಯನ ಆನಂದಕ್ಕಾಗಿಯೇ ಹೊರತು ಅನ್ನಕ್ಕಾಗಿ ಅಲ್ಲ. ಅದರ ಮೂಲ ಉದ್ದೇಶ ಸಮುದಾಯದ ಹಿತ ಕಾಪಾಡುವುದಾಗಿದೆ ಎಂದು ಹಿರಿಯ ಸಾಹಿತಿ ಡಾ. ಜಯಪ್ರಕಾಶ್ ಮಾವಿನಕುಳಿ ಹೇಳಿದರು.
      ಅವರು ಸಾಲಿಗ್ರಾಮ ಶ್ರೀ ಗುರುನರಸಿಂಹನ ಸನ್ನಿಧಿಯ ಬಯಲು ರಂಗಮಂಟಪದಲ್ಲಿ ಎರಡು ದಿನಗಳ ಕಾಲ ನಡೆದ ಉಡುಪಿ ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನ, ನುಡಿಹಬ್ಬ 2015ರ ಸಮಾರೋಪ ಭಾಷಣ ಮಾಡಿದರು.
ಭಾಷೆಗೆ ಕುತ್ತು ಬಂದರೆ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ನಡೆಸುವುದು ಹೇಗೆ ಎಂಬ ಪ್ರಶ್ನೆ ಮೂಡುತ್ತಿದೆ. ಕನ್ನಡ ಭಾಷೆ, ಸಾಹಿತ್ಯದ ಉಳಿವಿಗೆ  ಪ್ರತಿಯೊಬ್ಬ ಕನ್ನಡಿಗನೂ ಚಿಂತಿಸಿಬೇಕಾಗಿದೆ ಎಂದರು.
    ಸಮ್ಮೇಳನದ ಅಧ್ಯಕ್ಷ ಹಾಗೂ ಕಸಾಪ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ ಸಮ್ಮೇಳನಕ್ಕೆ ಪ್ರತಿಸ್ಪಂದನದಲ್ಲಿ ಮಾತನಾಡಿ ಸಾಹಿತ್ಯ ಸಮ್ಮೇಳನಗಳು ಒಂದು ತಲೆಮಾರಿಗಷ್ಟೇ ಸೀಮಿತವಾಗಿದೆಯೇ ಎಂಬ ಅಳುಕು ಕಾಡುತ್ತಿದೆ. ಮುಂದಿನ ದಿನಗಳಲ್ಲಿ ಯುವಜನರು ಸಾಹಿತ್ಯ, ಸಂಘಟನೆಯಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳುವಂತಾಗಬೇಕು. ಸಮ್ಮೇಳನಗಳು ಜನರನ್ನು  ಒಂದುಗೂಡಿಸುವ ಕೆಲಸ ಮಾಡಬೇಕು ಎಂದರು.
    ಸಾಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ವಹಿಸಿದ್ದರು. 
ಸಮ್ಮೇಳನಾಧ್ಯಕ್ಷ ಪುಂಡಲೀಕ ಹಾಲಂಬಿ ಹಾಗೂ ಸರೋಜ ಹಾಲಂಬಿ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಸುರೇಂದ್ರ ಅಡಿಗ ದಂಪತಿ ಮತ್ತು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಧರ್ಮದರ್ಶಿ ಎ.ಜಗದೀಶ ಕಾರಂತ ಅವರನ್ನು ಸನ್ಮಾನಿಸಲಾಯಿತು. 
     ಮಂಗಳೂರು ವಿವಿ ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ, ದ್ವಿತೀಯ, ತೃತೀಯ ರ್ಯಾಂಕ್ ಪಡೆದ ಕೋಟ ಪರಿಸರದ ನಾಗಾರಾಜ ಬೇಳೂರು, ಯೋಗಿಶ್ ಚಿತ್ರಪಾಡಿ, ಮಮತಾ ಚಿತ್ರಪಾಡಿಯವರನ್ನು ಸನ್ಮಾನಿಸಲಾಯಿತು. ಬಾರ್ಕೂರು ಮೂಡುಕೇರಿ ಗಂಗಮ್ಮ ರಾಮಚಂದ್ರ ಸ್ಮರಣಾರ್ಥ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. 
     ಅತಿಥಿಗಳಾಗಿ ಕರ್ಣಾಟಕ ಬ್ಯಾಂಕ್ ಕೋಟ ಶಾಖೆಯ ಪ್ರಬಂಧಕ ಕಂದನ್ ಭಟ್, ಜಿಲ್ಲಾ ಕಸಾಪ ಕಾರ್ಯದರ್ಶಿ ನಾರಾಯಣ ಮಡಿ, ಕುಂದಾಪುರ ತಾಲೂಕು ಕಸಾಪ ಅಧ್ಯಕ್ಷ ನಾರಾಯಣ ಖಾರ್ವಿ, ಕಾರ್ಕಳ ತಾಲೂಕು ಕಸಾಪ ಅಧ್ಯಕ್ಷ ಬಿ.ಸಿ.ರಾವ್ ಶಿವಪುರ, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎ.ಜಗದೀಶ ಕಾರಂತ ಉಪಸ್ಥಿತರಿದ್ದರು. ಉಡುಪಿ ತಾಲೂಕು ಕಸಾಪ ಅಧ್ಯಕ್ಷ ಪ್ರೊ. ಉಪೇಂದ್ರ ಸೋಮಯಾಜಿ ಸ್ವಾಗತಿಸಿದರು. ಸಂಜೀವ ಸಿ. ಗುಂಡ್ಮಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಪತಿ ಹೇರ್ಳೆ ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ಕೆ.ಸುಬ್ರಹ್ಮಣ್ಯ ಬಾಸ್ರಿ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com