ಗುರಿ ಇದ್ದರೆ ಸಾಧನೆ ಸಾಧ್ಯ: ಡಾ| ದಯಾನಂದ ಪೈ

ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಕಟ್ಟಡ ಉದ್ಘಾಟನಾ ಸಮಾರಂಭ

ಉಪ್ಪಿನಕುದ್ರು: ಮನಸ್ಸಿನಲ್ಲಿ ಒಂದು ನಿಶ್ಚಲ ಗುರಿ ಇದ್ದರೆ ಎಲ್ಲಾ ತೊಡಕುಗಳನ್ನು ವೀತಿ ಸಾಧನೆಗೈಯಲು ಸಾಧ್ಯ ಎಂದು ಬೆಂಗಳೂರಿನ ಸೆಂಚುರಿ ಬಿಲ್ಡರ್ಸ್ ನ ವ್ಯವಸ್ಥಾಪಕ ನಿರ್ದೇಶಕ ಡಾ| ಪಿ. ದಯಾನಂದ ಪೈ ಹೇಳಿದರು
     ಅವರು ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್ ಮತ್ತು ಉಪ್ಪಿನಕುದ್ರು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯ ಗೊಂಬೆಯಾಟ ಅಕಾಡೆಮಿ ಕಟ್ಟಡವನ್ನು  ಲೋಕಾರ್ಪಣೆಗೊಳಿಸಿ ಬಳಿಕ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

    ದೇವರು ಜೀವನದಲ್ಲಿ ಐಶ್ವರ್ಯವನ್ನು ಕೊಟ್ಟರೆ ಅದು ನನ್ನದಲ್ಲ. ಬೇರೆಯವರಿಗೆ ಸಲ್ಲುವಂತದ್ದು ಎಂದು ಭಾವಿಸಿ ಮುನ್ನಡೆಯಬೇಕು. ಹಾಗೆ ಭಾವಿಸುವುದರಿಂದ ದೇವರು ಒಂದಲ್ಲಾ ಒಂದು ರೀತಿಯಲ್ಲಿ ಒಳ್ಳೆಯ ಕೆಲಸಗಳಿಗೆ ನೆರವಾಗುತ್ತಾನೆ ಎಂದ ಅವರು ಅವಿಭಜಿತ ದ.ಕ. ಜಿಲ್ಲೆಯಲ್ಲಿ ಎಲ್ಲಾ ಕಲೆಗಳೂ ಶ್ರೀಮಂತವಾಗಿದ್ದರೂ ಕಲಾವಿದರುಗಳು ಮಾತ್ರ ಬಡವರಾಗಿರುತ್ತಾರೆ. ಅಂತವರಿಗೆ ಸ್ಥೈರ್ಯವನ್ನು ತುಂಬುವ ಕೆಲಸವಾಗಬೇಕು ಎಂದರು.  
          ಸಮಾರಂಭವನ್ನು ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು  ಜ್ಯೋತಿ ಬೆಳಗಿ ಉದ್ಘಾಟಿಸಿದರು.
ಹಿರಿಯ ಗೊಂಬೆಯಾಟಗಾರ ಹೆಮ್ಮಾಡಿಗೆ ಯು. ವಾಮನ ಪೈ ಅವರಿಗೆ 'ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ'ಯನ್ನು ಪ್ರಧಾನ ಮಾಡಲಾಯಿತು.
       ಇದೇ ಸಂದರ್ಭದಲ್ಲಿ ದಾನಿಗಳಾದ ದಯಾನಂದ ಪೈ ಹಾಗೂ ಮೋಹಿನಿ ಡಿ. ಪೈ ದಂಪತಿಗಳನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರದ ಸಾಧನೆಗೈದ ಜಯವಂತ ಪೈ ಕುಂದಾಪುರ, ಬಾಬುರಾಯ ಶೆಣೈ ಉಡುಪಿ, ಬಾಬು ಎನ್. ಪೂಜಾರಿ ಬೆಂಗಳೂರು, ಟಿ.ಎನ್. ಪ್ರಭು ತಲ್ಲೂರು, ಮಂಜುನಾಥ ಮೈಪಾಡಿ ಅವರನ್ನು ಸನ್ಮಾನಿಸಲಾಯಿತು. 
      ಮುಖ್ಯ ಅತಿಥಿಗಳಾಗಿ  ನಿವೃತ್ತ  ಪ್ರಾಧ್ಯಾಪಕ ಡಾ| ಎಚ್. ವಿ. ನರಸಿಂಹಮೂರ್ತಿ, ಚಾರ್ಟೆಟ್ ಅಕೌಂಟೆಂಟ್ ಪಿ.ಪಿ. ಮಯ್ಯ, ಕುಂದಾಪುರ ಶ್ರೀ ವೆಂಕಟರಮಣ ದೇವಸ್ಥಾನದ ಟ್ರಸ್ಟೀ ರಾಧಾಕೃಷ್ಣ ಶೆಣೈ, ತಲ್ಲೂರು ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮಿ ಕೊಠಾರಿ ಉಪಸ್ಥಿತರಿರುವರು.
    ಉಪ್ಪಿನಕುದ್ರು ಸರಕಾರಿ ಶಾಲೆಯಲ್ಲಿ ಏಳನೇ ತರಗತಿ ಹಾಗೂ ಎಸ್.ಎಸ್.ಎಲ್.ಸಿ. ಪ್ರಥಮ ಸ್ಥಾನಿಗಳಾದವರಿಗೆ ಬಹುಮಾನ ವಿತರಣೆ ಕೂಡ ನಡೆಯಿತು.
    ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್ ನ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಸ್ವಾಗತಿಸಿದರು.  ರತ್ನಾಕರ ಪೈ ವಂದಿಸಿದರು. ವಿಠ್ಠಲ ಮಹಾಬಲ ಕಾಮತ್ ನಿರೂಪಿಸಿದರು.
      ಮಧ್ಯಾಹ್ನ ಗೊಂಬೆಯಾಟದ ಕುರಿತು ವಿಶೇಷ ಉಪನ್ಯಾಸ ಜರುಗಲಿದ್ದು ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂ. ಎಲ್. ಸಾಮಗ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ  ಕೃಷ್ಣಯ್ಯ ಉಡುಪಿ, ಜನಾರ್ಧನ ಮರವಂತೆ, ವಿ. ಜಿ. ಹೆಗ್ಡೆ ಉಪಸ್ಥಿತರಿರುವರು.
    ಸಂಜೆ ಸಮಾರೋಪ ಸಮಾರಂಭದೊಂದಿಗೆ ಸ್ಥಳೀಯ ಶಾಲಾ ಮಕ್ಕಳಿಂದ ನೃತ್ಯ ಉಡುಪಿ ಯಕ್ಷಗಾನ ಕೇಂದ್ರದಿಂದ ಯಕ್ಷಗಾನ ಪ್ರದರ್ಶನ ಜರುಗಲಿದೆ.









ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com