ಪಂಚಾಯತ್‌:ಸವಲತ್ತು ವಿತರಣೆ

ಉಪ್ಪುಂದ: ಇಲ್ಲಿನ ಗ್ರಾಮ ಪಂಚಾಯತ್‌ನಲ್ಲಿ 2014-2015ನೇ ಸಾಲಿನ ಶೇ. 25 ಪ.ಜಾ. ಪಂ. ಪಂಗಡದ ಅನುದಾನದಲ್ಲಿ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮವು ಗಾ.ಪಂ. ಸಭಾಭವನದಲ್ಲಿ ಮಂಗಳವಾರ  ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿಧಧ ಸವಲತ್ತುಗಳನ್ನು ಫ‌ಲಾನುಭವಿಗಳಿಗೆ ವಿತರಣೆ ಮಾಡಿ ಮಾತನಾಡಿದ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಅವರು ಸರಕಾರದ ಯೋಜನೆಗಳು ದೂರಗಾಮಿ ಚಿಂತನೆಗಳಿಂದ ಕೂಡಿದ್ದು ಶೇ.25  ಅನುದಾನ‌ದಿಂದ ಪಲಾನುಭವಿಗಳ ಜೀವನ ಮಟ್ಟ ಸುಧಾರಿಸಲು ಮಕ್ಕಳು ಶಿಕ್ಷಣದಲ್ಲಿಯೂ ಪ್ರಗತಿ ಸಾಧಿಧಿಸಲು ಅನುಕೂಲವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ 4.96 ಲಕ್ಷ ಅನುದಾನದಲ್ಲಿ 8 ಸಿಲಿಂಡರ್‌ಗಳು 14 ಸೋಲಾರ್‌ ದೀಪ, 6 ಹೊಲಿಗೆ ಯಂತ್ರ, ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌, ಹಾಗೂ ವಿದ್ಯಾರ್ಥಿ ಸಹಾಯಧ‌ನವಾಗಿ 82,000 ರೂ. ವಿತರಣೆ, ಹಾಗೂ ವೈಯಕ್ತಿಕ ಅಭಿವೃದ್ಧಿ ಗಾಗಿ 1,37,000ರೂ.ಗಳನ್ನು ಒಟ್ಟು 29 ಕುಟುಂಬಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.

ಗ್ರಾ.ಪಂ. ಉಪಾಧ್ಯಕ್ಷೆ ನಾಗಮ್ಮ ದೇವಾಡಿಗ, ಗ್ರಾಮ ಲೆಕ್ಕಾಧಿಧಿಕಾರಿ ಮಂಜು ನಾಥ ಪಾಟೇಲ್‌, ಹಾಗೂ ಗ್ರಾ.ಪಂ.ನ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಸಂದೇಶಭಟ್‌ ಪ್ರಾಸ್ತಾವಿಕ ಭಾಷಣ ಮಾಡಿದರು. ಗ್ರಾ.ಪಂ. ಪಿ.ಡಿ.ಓ. ಹರೀಶ ಮೊಗವೀರ ಸ್ವಾಗತಿಸಿದರು. ಕಾರ್ಯದರ್ಶಿ ಬಿ.ಮಾಧವ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com