ವಕ್ವಾಡಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭೆ

ವಕ್ವಾಡಿ : ಪ್ರತಿಯೊಬ್ಬರು ಒಂದಾಗಿ ನಿಷ್ಕಲ್ಮಶ  ಮನಸ್ಸಿನಿಂದ ಭಗವಂತನನು ಆರಾಧಿಧಿಸಿದ್ದಲ್ಲಿ ಆಧ್ಯಾತ್ಮಿಕ ಭಾವ ಹಾಗೂ ಧರ್ಮಶ್ರದ್ಧೆ  ಊರಿನಲ್ಲಿ ಬೆಳೆಯುತ್ತದೆ.  ತನ್ನ  ಬದುಕಿನೊಂದಿಗೆ ಇತರರ  ಸುಖ ಹಾರೈಸುವುದುರಿಂದ ಜೀವನ ಸಾರ್ತಕತೆಯನ್ನು ಪಡೆಯುತ್ತದೆ ಎಂದು ಬಸ್ರೂರು  ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ  ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು.

ಅವರು ವಕ್ವಾಡಿ  ಶ್ರೀ ಮಹಾ ಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಪ್ರಗತಿ ಬಂಧು  ಸ್ವಸಹಾಯ ಸಂಘಗಳ ಒಕ್ಕೂಟದ ಆಶ್ರಯದಲ್ಲಿ   ನಡೆದ  ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಶೃಂಗೇರಿ ಶ್ರೀಶಾರದಾ ಪೀಠದ ಪ್ರಾಂತೀಯ ಧರ್ಮಾಧಿಧಿಕಾರಿ ಡಾ| ಎಚ್‌. ವಿ.ನರಸಿಂಹಮೂರ್ತಿ ಧಾರ್ಮಿಕ ಉಪನ್ಯಾಸ ನೀಡುತ್ತಾ,  ನಾವು  ಉತ್ತಮ ಜೀವನದ ಪದ್ದತಿಯೊಂದಿಗೆ  ಧಾರ್ಮಿಕ ಶ್ರದ್ಧಾ ಮನೋಭಾವನೆ ಬೆಳೆಸಿಕೊಂಡಾಗ ಬದುಕಿನಲ್ಲಿ ಸಫಲತೆ ಕಾಣಬಹುದು.   ಗ್ರಾಮೀಣ ಪ್ರದೇಶದಲ್ಲಿ  ಪೋಲಾಗುತ್ತಿರುವ ಸಂಪತ್ತಿನ ಸದ್ಬಳಕೆ, ಉಳಿತಾಯದ ಮನೋಭಾವನೆ ಮತ್ತು ಮನುಷ್ಯನ ದುಷ್ಟ ಪ್ರವೃತ್ತಿಗಳು ನಾಶವಾಗಿ ಸುಸಂಸ್ಕೃತ ಜೀವನ ನಡೆಸಲು ಸಹಕಾರಿಯಾಗಿದೆ ಎಂದರು.

ಕೋಟೇಶ್ವರ ಜನಜಾಗೃತಿ ವೇದಿಕೆಯ ಅಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ, ಸಾರ್ವಜನಿಕ ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿಯ ಉಪಾಧ್ಯಕ್ಷ ಸತ್ಯರಂಜನ್‌ ಹೆಗ್ಡೆ, ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ  ಲಕ್ಷ್ಮೀ ನಾರಾಯಣ ಹೊಳ್ಳ, ತಾಲೂಕು ಸ್ವಸಹಾಯ ಸಂಘಗಳ ಯೋಜನಾಧಿಧಿಕಾರಿ ಅಮರಪ್ರಸಾದ ಶೆಟ್ಟಿ, ಪ್ರಗತಿ ಬಂದು ಸ್ವಸಹಾಯ ಸಂಘಗಳ ಅಧ್ಯಕ್ಷ ರಾಘವೇಂದ್ರ ಆಚಾರ್‌, ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನಾರಾಯಣ ಶೆಟ್ಟಿ    ಉಪಸ್ಥಿತರಿದ್ದರು.

ಕೋಟೇಶ್ವರ ವಲಯ ಮೇಲ್ವಿಚಾರಕಿ ಮಾಲತಿ ಎಸ್‌. ಸ್ವಾಗತಿಸಿದರು. ಶಿಕ್ಷಕ ವೇಣುಗೋಪಾಲ ಹೆಗ್ಡೆ ಕಾರ್ಯಕ್ರ ನಿರೂ ಪಿಸಿದರು. ಶಿವಪ್ರಸಾದ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com