ಕನ್ನಡದ ಉಳಿವಿಗೆ ಕಟಿಬದ್ಧರಾಗೋಣ: ಡಿವೈಎಸ್ಪಿ ಮಂಜುನಾಥ ಶೆಟ್ಟಿ

ಕುಂದಾಪುರ: ಆಧುನಿಕತೆಯೊಂದಿಗೆ ಬದಲಾಗುತ್ತಿರುವ ನಾವು, ನಮ್ಮತನವನ್ನು ಮರೆಯದೇ ನಾಡು-ನುಡಿಯ ವಿಚಾರದಲ್ಲಿ ಮುಂದಿನ ಪೀಳಿಗೆಗೆ ಯಾವ ತೆರನಾದ ಕೊಡುಗೆಯನ್ನು ನೀಡಬಹುದು ಎಂಬುದರ ಬಗ್ಗೆ ಯೋಚಿಸಬೇಕಾಗಿದೆ. ಅದಕ್ಕೆ ಪೂಕರವಾಗಿ ಏರ್ಪಡಿಸಿರುವ ಇಂತಹ ಸಂವಾದಗಳು ಜನರಲ್ಲಿ ಭಾಷಾ ಪ್ರೀತಿಯನ್ನು ಹುಟ್ಟುಹಾಕಲು ಪ್ರೇರಣೆಯಾಗಲಿ ಎಂದು ಕುಂದಾಪುರದ ಡಿವೈಎಸ್ಪಿ ಎಂ. ಮಂಜುನಾಥ ಶೆಟ್ಟಿ ಹೇಳಿದರು.
   ಅವರು ವಿಜಯವಾಣಿ ದಿನಪತ್ರಿಕೆ ಹಮ್ಮಿಕೊಂಡ ಕನ್ನಡ ಅಭಿಯಾನ, 'ಓದುಗ-ಚಿಂತಕರೊಂದಿಗೆ ಸಂವಾದ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿಡಿದರು.  ಕನ್ನಡಿಗರು ಪ್ರಪಂಚದ ಯಾವುದೇ ಮೂಲೆಯಲ್ಲಿ ಬದುಕುತ್ತಿದ್ದರೂ ಕನ್ನಡವನ್ನು ಮರೆಯದೇ ಕನ್ನಡ ಭಾಷೆಯನ್ನು ಉಳಿಸಲು ಕಟಿಬದ್ದರಾಗಬೇಕು ಎಂದರು.
      ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ವೇದಿಕೆಯ ಅಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸ.ಪ.ಪೂ. ಕಾಲೇಜಿನ ಕಛೇರಿ ಸಹಾಯಕ ಸುರೇಶ್ ಖಾರ್ವಿ ಅವರನ್ನು ಸನ್ಮಾನಿಸಲಾಯಿತು.
     ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಕೋಟ ಶ್ರೀನಿವಾಸ ಪೂಜಾರಿ, ತಹಸೀಲ್ದಾರರಾದ ಗಾಯತ್ರಿ ನಾಯಕ್, ವಿದ್ಯುತ್ ಗುತ್ತಿಗೆದಾರ ಆರ್.ಕೆ. ನಾಯಕ್, ರೋಟರಿ ಅಸಿಸ್ಟೆಂಟ್ ಗವರ್ನರ್ ಗಣೇಶ್ ಶೆಟ್ಟಿ ಮೊಳಹಳ್ಳಿ, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
    ವಿಜಯವಾಣಿಯ ಕುಂದಾಪುರ ವರದಿಗಾರ ಜಯಶೇಖರ್ ಮಡಪ್ಪಾಡಿ ಸ್ವಾಗತಿಸಿದರು, ಜಿಲ್ಲಾ ವರದಿಗಾರ ಶ್ರೀಪತಿ ಹೆಗ್ಡೆ ಹಕ್ಲಾಡಿ ಪ್ರಸ್ತಾವನೆಗೈದರು. ಶಿಕ್ಷಕ ವಿಶ್ವನಾಥ ಕರಬ ಕಾರ್ಯಕ್ರಮ ನಿರೂಪಿಸಿದರು.
      ಸಭಾ ಕಾರ್ಯಕ್ರಮದ ಬಳಿಕ ಓದುಗರು-ಚಿಂತಕರ ಸಂವಾದ ನಡೆಯಿತು. ಚಿಂತಕ ಶ್ರೀಧರ ಬಳಗಾರ್ ಕುಮುಟಾ ಶೈಕ್ಷಣಿಕ ಮಾಧ್ಯಮವನ್ನಾಗಿ ಕನ್ನಡ ಬಲಗೊಳಿಸುವ ಕುರಿತು ಅವರು ವಿಷಯ ಮಂಡಿಸಿದರು. ಸಂವಾದಕರಾದ ಪ್ರೊ. ರೇಖಾ ಬನ್ನಾಡಿ, ಡಾ| ಪಾರ್ವತಿ ಜಿ. ಐತಾಳ್, ಕೋನಳ್ಳಿ ರಾಜೀವ ನಾಯ್ಕ ಸಂವಾದದಲ್ಲಿ ಭಾಗವಹಿಸಿದರು. ಉಪನ್ಯಾಸಕ ಸುರೇಂದ್ರ ಶೆಟ್ಟಿ ಸಮನ್ವಯಕಾರರಾಗಿದ್ದರು. ಉಪನ್ಯಾಸಕ ಪ್ರತಾಪಚಂದ್ರ ಶೆಟ್ಟಿ, ಸಾಹಿತಿ ಎ.ಎಸ್.ಎನ್. ಹೆಬ್ಬಾರ, ಚಿಂತಕ ಕೃಷ್ಣ್ಣರಾಜ ಕರಬ, ಉಪನ್ಯಾಸಕ ರಂಜಿತ್ ಕುಮಾರ್ ಶೆಟ್ಟಿ ಮೊದಲಾದವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಚಿತ್ರಗಳು: ರಾಘವೇಂದ್ರ ಬಳ್ಕೂರು
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com