ಬೈಂದೂರು-ಉಪ್ಪುಂದ: ಮಾ.27ಕ್ಕೆ ವಿಶ್ವ ರಂಗಭೂಮಿ ದಿನಾಚರಣೆ

ಬೈಂದೂರು: ಮಾರ್ಚ 27ರಂದು ವಿಶ್ವ ದಿನಾಚರಣೆ ಅಂಗವಾಗಿ ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಲಾವಣ್ಯ ಬೈಂದೂರು ಸಹಯೋಗದೊಂದಿಗೆ ಇಲ್ಲಿನ ಶಾರದಾ ವೇದಿಕೆಯಲ್ಲಿ ಸಂಜೆ. 6ಗಂಟೆಗೆ ವಿಚಾರ ಸಂಕಿರಣ, ಸನ್ಮಾನ ಹಾಗೂ ರಂಗಗೀತೆಗಳ ಗಾಯನ ನಡೆಯಲಿದೆ. ನಿನಾಸಂ ಪದವೀಧರ ವಿನಾಯಕ ಎಸ್. ಎಂ. ಮಕ್ಕಳ ರಂಗಭೂಮಿಯ ಸವಾಲುಗಳ ಕುರಿತಾಗಿ ಮಾತನಾಡಲಿದ್ದಾರೆ. ಹಿರಿಯ ರಂಗಕರ್ಮಿ ರಾಬರ್ಟ್ ಡಿ'ಸೋಜ ಅವರಿಗೆ ರಂಗಸನ್ಮಾನ ನಡೆಯಲಿದ್ದು, ಸಭಾ ಕಾರ್ಯಕ್ರಮದ ಬಳಿಕ ಮೂರ್ತಿ ಡಿ. ಬೈಂದೂರು ಮತ್ತು ಸಂಗಡಿಗರಿಂದ ರಂಗಗೀತೆಗಳ ಗಾಯನ ನಡೆಯಲಿದೆ.

ಇದೇ ದಿನ ಉಪ್ಪುಂದ ಜೆಸಿಐ, ರಂಗಸ್ಥಳ ಉಪ್ಪುಂದ ಹಾಗೂ ಸುರಭಿ ಬೈಂದೂರು ಇವರ ಸಹಯೋಗದೊಂದಿಗೆ ಉಪ್ಪುಂದದ ಮಾತೃಶ್ರೀ ಸಭಾಭವನದಲ್ಲಿ ಸಂಜೆ6:30ಕ್ಕೆ ನಡೆಯಲಿರುವ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ಮಂಗಳೂರಿನ ಜರ್ನಿ ಥಿಯೇಟರ್ ಗ್ರೂಫ್ ಅವರ ಇವಾಳಜ್ಜಿಯೂ ಆದಮಜ್ಜನೂ ಎಂಬ ವಿಶಿಷ್ಟ ರಂಗಪ್ರಯೋಗ ಹಾಗೂ ಹಿರಿಯ ರಂಗಕರ್ಮಿಗೆ ರಂಗಬಾಗಿನ ಸಮರ್ಪಣೆಯ ಕಾರ್ಯಕ್ರಮ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com