ಕುಂದಾಪುರದಲ್ಲಿ ಕ್ಷಯರೋಗ ದಿನಾಚರಣೆ

ಕುಂದಾಪುರ: ಮಾದಕ ದ್ರವ್ಯಗಳನ್ನು   ದೂರವಿಡುವ ಮೂಲಕ  ಪ್ರತಿಯೊಬ್ಬರು ಆರೋಗ್ಯವಂತ ಬದುಕು ಪಡೆಯಲು ಸಾಧ್ಯ. ಗುಟ್ಕಾ, ತಂಬಾಕು, ಮದ್ಯ ಸೇವೆನೆಯಿಂದ ಮಾರಕ ಕ್ಷಯ ರೋಗಕ್ಕೆ ಆಹ್ವಾನ ನೀಡಿದ್ದಂತಾಗುತ್ತದೆ.ಆದ್ದರಿಂದ ಪರಿಪೂರ್ಣವಾದ ಉತ್ತಮ ಆಹಾರವನ್ನು ಸೇವಿಸಿ, ಮಾದಕ ವಸ್ತುಗಳಿಂದ ದೂರವಿದ್ದಲ್ಲಿ   ಆರೋಗ್ಯವಂತ ಜೀವನ  ಪಡೆಯಲು ಸಾಧ್ಯ ಎಂದು ಜಿ.ಪಂ.  ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷೆ ಗೌರಿ ದೇವಾಡಿಗ ಹೇಳಿದರು.

ಅವರು ಕುಂದಾಪುರ ಭಂಡಾರ್‌ಕಾರ್ಸ್‌ ಕಾಲೇಜಿನ ಕೋಯಾಕುಟ್ಟಿ ಸಭಾಂಗಣ ದಲ್ಲಿ  ಬುಧವಾರ ಜಿ.ಪಂ. ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪರಿಷ್ಕೃತ ರಾಷ್ಟ್ರೀಯ  ಕ್ಷಯರೋಗ  ನಿಯಂತ್ರಣ ಕಾರ್ಯಕ್ರಮ ಕುಂದಾಪುರ ತಾ| ಕ್ಷಯ ಘಟಕ  ಹಾಗೂ ಭಂಡಾರ್‌ಕಾರ್ಸ ಕಾಲೇಜಿನ ಆಶ್ರಯದಲ್ಲಿ  ನಡೆದ ವಿಶ್ವ ಕ್ಷಯರೋಗ ದಿನಾಚರಣೆ-2015ನ್ನು ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದ ಅಧಿಕಾರಿ ಆಲಂದೂರು ಮಂಜುನಾಥ ಗಾಣಿಗ ಪ್ರಸ್ತಾವನೆಗೈಯುತ್ತಾ 1882 ಮಾರ್ಚ್ 24ರಂದು ರಾಬರ್ಟ್ ಎಂಬವರು ಕ್ಷಯರೋಗಕ್ಕೆ ಕಾರಣವಾಗಿರುವ ವೈರಲ್ ಪತ್ತೆ ಹಚ್ಚಿದರು. ಈ ನೆಲೆಯಲ್ಲಿ ವಿಶ್ವದಾದ್ಯಂತ ಮಾರ್ಚ್ ತಿಂಗಳಲ್ಲಿ ವಿಶ್ವಕ್ಷಯರೋಗ ದಿನಾಚರಣೆ ಆಚರಿಸಲಾಗುತ್ತಿದೆ.  ದೇಶದಲ್ಲಿ ಕ್ಷಯದಿಂದ ಪ್ರತಿ ನಿಮಿಷಕ್ಕೆ ಒಬ್ಬ ವ್ಯಕ್ತಿ ಸಾವನ್ನಪ್ಪುತ್ತಿದ್ದಾರೆ. ಪ್ರತಿದಿನ ಅಂದಾಜು 1000 ಮಂದಿ ಬಲಿಯಾಗು ತ್ತಿದ್ದಾರೆ. ಕ್ಷಯ ಗುಣಪಡಿಸಬಹುದಾದ ಕಾಯಿಲೆಯಾಗಿದ್ದರೂ ಸರಿಯಾದ ತಿಳುವಳಿಕೆ, ಜಾಗೃತಿ ಇಲ್ಲದಿರುವುದು ದುರಂತಕ್ಕೆಡೆಮಾಡಿಕೊಡುತ್ತಿದೆ ಎಂದರು.

ಕೋಡಿ-ಬೆಂಗ್ರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿಶ್ವನಾಥ್ ಕ್ಷಯರೋಗ ಕುರಿತು ಸಮಗ್ರ ಮಾಹಿತಿ ನೀಡಿದರು. ಕುಂದಾಪುರ ತಾ.ಪಂ.ಅಧ್ಯಕ್ಷ ಭಾಸ್ಕರ ಬಿಲ್ಲವ, ಪುರಸಭೆ ಅಧ್ಯಕ್ಷೆ ಯು.ಎಸ್.ಕಲಾವತಿ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ರಜನಿ ಉಪಸ್ಥಿತರಿದ್ದರು. ಮಾಧುರಿ ಮತ್ತು ಸಂಗೀತಾ ಪ್ರಾರ್ಥಿಸಿದರು. ಭಂಡಾಕಾರ್ಸ್‌ ಕಾಲೇಜಿನ ಪ್ರಾಂಶುಪಾಲ ಡಾ|ನಾರಾಯಣ ಶೆಟ್ಟಿ ಸ್ವಾಗತಿಸಿದರು. ವಿಭಾ ಕಾರ್ಯಕ್ರಮ ನಿರ್ವಹಿಸಿದರು. ಗುರುದಾಸ್ ವಂದಿಸಿದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com