ಮನೆಯಂಗಳಕ್ಕೆ ಬರುತ್ತಿವೆ ಕಾಡುಕೋಣಗಳು

ಅಮಾಸೆಬೈಲು : ಗ್ರಾಮದ ಮಾಂಡವಿ ಶಂಕರನಾರಾಯಣದಲ್ಲಿ ಕಾಡುಕೋಣಗಳ ಹಿಂಡು ಮನೆಯಂಗಳಕ್ಕೆ ಬಂದು ಗಾಬರಿ ಹುಟ್ಟಿಸಿದ ಘಟನೆ ನಡೆದಿದೆ. 
     ಕಳೆದ ಕೆಲವು ದಿನಗಳಿಂದ ಜನವಸತಿ ಪ್ರದೇಶದತ್ತ ಬರುತ್ತಿರುವ ಕಾಡುಕೋಣಗಳು ಬುಧವಾರ ಬಸವ ನಾಯ್ಕ್ ಅವರ ಮನೆಯಂಗಳಕ್ಕೆ  ನುಗ್ಗಿ  ಹುಲ್ಲು, ಸೊಪ್ಪು ಮೆಂದು ತೋಟದಲ್ಲಿ ಸುತ್ತಾಡಿ ಮರಳಿ ಕಾಡು ಸೇರಿವೆ. ಎಂಟು ಕಾಡುಕೋಣಗಳು ಇದ್ದವು ಎನ್ನಲಾಗಿದೆ. ಕೆಲವು ದಿನಗಳಿಂದಿಚೆಗೆ ಇವುಗಳು ಕೃಷಿಗದ್ದೆ, ಮನೆಯಂಗಳದತ್ತ ಹಿಂಡಾಗಿ ಬಂದು ಸಂಗ್ರಹಿಸಿಟ್ಟಿರುವ ಹುಲ್ಲು, ಸೊಪ್ಪುಗಳನ್ನು ಮೇಯ್ದು ಹೋಗುತ್ತಿವೆ. ಆದರೆ ಈ ತನಕ ಯಾವುದೇ ತೊಂದರೆ ನೀಡಿಲ್ಲ. ಅರಣ್ಯ ಇಲಾಖೆ ಸೂಕ್ತ ಕ್ರಮಕೈಗೊಳ್ಳುವುದು ಒಳ್ಳೆಯದು ಎಂದು ಸ್ಥಳೀಯರು ತಿಳಿಸಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com