ಏ.25: ಕುಡಿಯುವ ನೀರಿಗೆ ಒತ್ತಾಯಿಸಿ ಮುತ್ತಿಗೆ

ಕರ್ಕುಂಜೆ : ಏಪ್ರಿಲ್ 25ರಂದು ಕುಡಿಯುವ ನೀರಿಗೆ ಒತ್ತಾಯಿಸಿ ಕೃಷಿ ಕೂಲಿಕಾರರ ಸಂಘದಿಂದ ಗ್ರಾಮ ಪಂಚಾಯತ್ ಕಚೇರಿ ಮುತ್ತಿಗೆ ಹೋರಾಟ. 

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಕುಂದಾಪುರ ತಾಲೂಕು ಸಮಿತಿ, ಮತ್ತು ಕರ್ಕುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿಗಳ ನೇತೃತ್ವದಲ್ಲಿ ಕರ್ಕುಂಜೆ, ಗುಲ್ವಾಡಿ ಗ್ರಾಮಗಳ ನಿವೇಶನ ರಹಿತರು, ಕೃಷಿ ಕೂಲಿಕಾರರು ಹಾಗೂ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕೆಲಸಗಾರರು ಕುಡಿಯುವ ನೀರು ಸರಬರಾಜು, ಮನೆ ನಿವೇಶನ ಹಕ್ಕು ಪತ್ರ, ಸೌಚಾಲಯಕ್ಕೆ ಆರ್ಥಿಕ ನೆರವು ಇತ್ಯಾದಿ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಸಿ, ಏಪ್ರಿಲ್ ೨೫ ಶನಿವಾರ ಬೆಳಿಗ್ಗೆ ೧೧.೦೦ ಗಂಟೆಗೆ ಕರ್ಕುಂಜೆ ಗ್ರಾಮ ಪಂಚಾಯತ್ ಕಛೇರಿ ಎದುರು ಬೃಹತ್ ಪ್ರತಿಭಟನಾ ಸತ್ಯಾಗ್ರಹ- ಪಂಚಾಯತ್ ಕಛೇರಿ ಮುತ್ತಿಗೆ ಹೋರಾಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತು. 

ಗುಲ್ವಾಡಿ ಕರ್ಕುಂಜೆ ಗ್ರಾಮಗಳ ನಿವೇಶನ ಸ್ಥಳದ ಜನತಾ ಕಾಲೋನಿ ಪ್ರದೇಶದ ನಿವಾಸಿಗಳಿಗೆ ಮೂಲ ಭೂತ ಅವಶ್ಯಕತೆಗಳಾದ ಕುಡಿಯುವ ನೀರನ್ನು ಸರಬರಾಜು ಮಾಡಲು ಹಲವಾರು ಭಾರಿ ಸ್ಥಳಿಯ ಆಡಳಿತಕ್ಕೆ ವಿನಂತಿಸಿಕೊಂಡರು ಬೇಡಿಕೆ ಈಡೇರದ ಕಾರಣ ಅನಿವಾರ‍್ಯವಾಗಿ ಬೀದಿಗಿಳಿದು ಪ್ರತಿಭಟನಾ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ಕೋಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com