ಡಾ| ಎಚ್‌. ಶಾಂತಾರಾಮ ಸಾಹಿತ್ಯ ಪ್ರಶಸ್ತಿಗೆ ಪುಸ್ತಕ ಆಹ್ವಾನ

ಕುಂದಾಪುರ: ಮಣಿಪಾಲ ಅಕಾಡೆಮಿಯ ಆಡಳಿತಾಧಿಕಾರಿ ಡಾ| ಎಚ್‌. ಶಾಂತಾರಾಮ್‌ ಅವರ ಹೆಸರಿನಲ್ಲಿ ಭಂಡಾರ್ಕಾರ್ ಕಾಲೇಜು ನೀಡುತ್ತಿರುವ ಅತ್ಯುತ್ತಮ ಕೃತಿ ಪ್ರಶಸ್ತಿಗೆ 2013-2014ರಲ್ಲಿ ಮೊದಲ ಆವೃತ್ತಿಯಾಗಿ ಪ್ರಕಟಗೊಂಡ ಸಣ್ಣ ಕಥಾ ಸಂಕಲನವನ್ನು ಆಹ್ವಾನಿಸಲಾಗಿದೆ.

ಡಾ| ಎಚ್‌. ಶಾಂತಾರಾಮ್‌ ಅವರು ಶಿಕ್ಷಣ, ಸಾಹಿತ್ಯ, ಸಂಸ್ಕೃತಿಗಳಲ್ಲಿ ಅಪಾರ ಆಸಕ್ತಿ ಉಳ್ಳವರು. ಜತೆಗೆ ಕ್ರಿಯಾಶೀಲ ವ್ಯಕ್ತಿಗಳನ್ನು, ಸೃಜನಶೀಲ ಮನಸ್ಸುಗಳನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತ ಬಂದಿದ್ದು, ಉಡುಪಿ - ಮಣಿಪಾಲ - ಕುಂದಾಪುರ ಪರಿಸರವನ್ನು ಸಾಹಿತ್ಯಕ ಚಟುವಟಿಕೆ, ನಾಟಕ, ಯಕ್ಷಗಾನ ಪ್ರದರ್ಶನಗಳ ಮೂಲಕ ಸಾಂಸ್ಕೃತಿಕವಾಗಿ ಗಟ್ಟಿಗೊಳ್ಳುವಂತೆ ಮಾಡುವಲ್ಲಿ ಅಪಾರ ಕೊಡುಗೆ ನೀಡಿದ್ದಾರೆ.

ಕಥಾ ಸಂಕಲನದ ನಾಲ್ಕು ಪ್ರತಿಗಳನ್ನು ಎ. 30ರೊಳಗೆ ಡಾ| ಎಚ್‌. ಶಾಂತಾರಾಮ್‌ ಸಾಹಿತ್ಯ ಪ್ರಶಸ್ತಿ, ಭಂಡಾರ್ಕಾರ್ ಕಾಲೇಜು ಕುಂದಾಪುರ - 576201 ವಿಳಾಸಕ್ಕೆ ಕಳುಹಿಸಿಕೊಡುವಂತೆ ಕೋರಲಾಗಿದೆ.

ಪ್ರಶಸ್ತಿಯು 15,000 ರೂ. ನಗದು ಮತ್ತು ಬೆಳ್ಳಿಯ ಫಲಕವನ್ನು ಒಳಗೊಂಡಿದೆ. ಅಗಸ್ಟ್‌ 13ರಂದು ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮಾಹಿತಿಗಾಗಿ 08254-230369 ಅಥವಾ 9449257263 ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com