ಕಮಲಶಿಲೆ: ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಎ. 10ರಂದು ಶ್ರೀ ಮನ್ಮಹಾರಥೋತ್ಸವ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರಗಲಿದೆ.
ಎ. 7ರಂದು ಅಂಕುರಾರೋಪಣ, ಧ್ವಜಾರೋಹಣ, ಭೇರಿ ತಾಡನ, ಯಾಗಶಾಲೆ ಪ್ರವೇಶ, ಕೌತುಕ ಬಂಧನ, ಶಿಬಿತಾಯನೋತ್ಸವ. ಎ. 8ರಂದು ಸಿಂಹವಾಹನೋತ್ಸವ. ಎ. 9ರಂದು ಪುಷ್ಪಕ ವಾಹನೋತ್ಸವ. ಎ. 10ರಂದು ಶ್ರೀ ಮನ್ಮಹಾರಥೋತ್ಸವ. ಎ. 11ರಂದು ಚೂರ್ಣೋತ್ಸವ. ಎ. 12ರಂದು ಅವಭೃತ, ಮೃಗಯಾ ವಿಹಾರ, ಪೂರ್ಣಾಹುತಿ, ಧ್ವಜಾವರೋಹಣ, ಕುಂಭಾಭಿಷೇಕ ಮುಂತಾದ ಧಾರ್ಮಿಕ ಕಾರ್ಯಕ್ರಮ ಜರಗಲಿದೆ.
ಪ್ರತಿ ದಿನವೂ ಊರ ಹಾಗೂ ಪರವೂರ ಭಕ್ತರಿಗೆ ಊಟ ಮತ್ತು ವಸತಿ ವ್ಯವಸ್ಥೆ ಇದ್ದು, ಜಾತ್ರೆ ಸಂದರ್ಭ ದಿನವೂ ಭಕ್ತರಿಗೆ ಸಿದ್ದಾಪುರದಿಂದ ಕ್ಷೇತ್ರಕ್ಕೆ ವಿಶೇಷ ಬಸ್ಸಿನ ವ್ಯವಸ್ಥೆ ಇರುತ್ತದೆ. ವಿಶೇಷವಾಗಿ ಜಾತ್ರೆ ಮಹೋತ್ಸವದ ಎಲ್ಲ ದಿನಗಳಲ್ಲಿಯೂ ದೇವಳದಲ್ಲಿ ಸೀರೆಗಳ ಮಾರಾಟ ನಡೆಯಲಿದೆ ಎಂದು ದೇವಳದ ಪ್ರಕಟನೆ ತಿಳಿಸಿದೆ.
0 comments:
Post a Comment