ಸಂಜೀವಿನಿ ದತ್ತಿನಿ ವಿತರಣೆ, ಸಾಧಕರಿಗೆ ಸನ್ಮಾನ

ಕೋಟ: ಯುವ ಸಮುದಾಯ ಸಮಾಜ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳುವ ಮೂಲಕ ಸಮಾಜದ ಎಲ್ಲ ವರ್ಗದವರನ್ನು ಒಗ್ಗೂಡಿಸಿ ಬೆಳವಣಿಗೆಗೆ ಕಾರಣಕರ್ತರಾಗಬೇಕು ಎಂದು ಡಾ.ವಾಸುದೇವ ಹೊಳ್ಳ ಹೇಳಿದರು. 

ಮಣೂರು ಪ್ರಾಥಮಿಕ ಶಾಲೆ ವಠಾರದಲ್ಲಿ ಸ್ಥಳೀಯ ಶ್ರೀ ಮಹಾಲಿಂಗೇಶ್ವರ ದೇವಳ ಜಾತ್ರೆಯ ಪ್ರಯುಕ್ತ ಮಣೂರು ಫ್ರೆಂಡ್ಸ್ ಮಣೂರು ಹಮ್ಮಿಕೊಂಡ ಸಂಜೀವಿನಿ ದತ್ತಿನಿ ವಿತರಣೆ, ಸಾಧಕರಿಗೆ ಸನ್ಮಾನ ಕಾರ‌್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

40 ವರ್ಷಗಳಿಂದ ಪಿಗ್ಮಿ ಮತ್ತು ಬಸ್ ಏಜೆಂಟ್ ಆಗಿ ಸೇವೆ ಸಲ್ಲಿಸಿದ 82 ಹರೆಯದ ಪಾಂಡುರಂಗ ಪೈ ಮಣೂರು ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಆಯೋಜಿಸಿರುವ ರಾಷ್ಟ್ರೀಯ ಮಟ್ಟದ ವಿಜಿ ಟ್ರೋಫಿ ಕ್ರಿಕೆಟ್ ಪಂದ್ಯಾಟದಲ್ಲಿ ಕರ್ನಾಟಕದಿಂದ ಆಯ್ಕೆಯಾಗಿ ರುವ ಮಣೂರು ಭರತ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ನಾಗೇಶ್ ಆಚಾರ್ಯ, ಸರಿತಾ ಬಾಳೆಬೆಟ್ಟು, ಚೈತ್ರಾ ಬಾಳೆಬೆಟ್ಟು ಅವರಿಗೆ ಸಂಜೀವಿನಿ ದತ್ತಿನಿಧಿ ವಿತರಿಸಲಾಯಿತು. 

ಕೋಟ ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಬ್ರಾಯ ಆಚಾರ್ಯ ಮಣೂರು, ರಾಧಾಕೃಷ್ಣ ಉರಾಳ, ಸತೀಶ್ ಎಚ್. ಕುಂದರ್, ಉಮಾನಾಥ ಪೈ, ಶಿವರಾಮ ಶೆಟ್ಟಿ ಮಣೂರು, ಉದ್ಯಮಿ ಉಮೇಶ್ ಆಚಾರ್ಯ ಮಣೂರು,ಮಣೂರು ಫ್ರೆಂಡ್ಸ್ ಗೌರವಾಧ್ಯಕ್ಷ ಸುರೇಶ್ ಆಚಾರ್ಯ, ಅಧ್ಯಕ್ಷ ಸುಧಾಕರ ಆಚಾರ್ಯ ಮಣೂರು, ಉಪಾಧ್ಯಕ್ಷ ನವೀನ ಅಆಚಾರ‌್ಯ, ಕಾರ್ಯದರ್ಶಿ ದಿನೇಶ್ ಆಚಾರ್ಯ, ಖಜಾಂಚಿ ರವಿಚಂದ್ರ ಆಚಾರ್ಯ ಉಪಸ್ಥಿತರಿದ್ದರು. ಬಳಿಕ ರಘುಪಾಂಡೇಶ್ವರ ನಿರ್ದೇಶನದ ನಗೆನಾಟಕ ಪ್ರದರ್ಶಿಸಲ್ಪಟ್ಟಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com