ಕುಂದಾಪುರ ಸೌ. ಕ್ರೆ. ಕೋ- ಅಪರೇಟಿವ್ ಸೊಸೈಟಿ ಕೋಟೇಶ್ವರ ಶಾಖೆ ಉದ್ಘಾಟನೆ

ಕುಂದಾಪುರ: ಕೋಟೇಶ್ವರ ಬೆಳೆಯುತ್ತಿರುವ ಪಟ್ಟಣ. ಸಹಕಾರ ವ್ಯವಸ್ಥೆಯಡಿ ಇಂದಿಗೂ ತುಂಬು ನಂಬಿಕೆ ಜನರ ಲ್ಲಿದೆ. ಜನರ ನಂಬಿಕೆಗೆ ಅನುಸಾರವಾಗಿ ಉತ್ತಮ ಸೇವೆ ನೀಡುವ ಮೂಲಕ ಶಾಖೆ ದೊಡ್ಡಪ್ರಮಾಣದಲ್ಲಿ ಬೆಳೆಯಲಿ ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು. 

ಕೋಟೇಶ್ವರ ಬಸ್‌ತಂಗುದಾಣ ಸಮೀಪದ ನಾಗಪ್ರಭ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿರುವ ಕುಂದಾಪುರ ಸೌಹಾರ್ದ ಕ್ರೆಡಿಟ್ ಕೋ- ಅಪರೇಟಿವ್ ಸೊಸೆಟಿ ಕೋಟೇಶ್ವರ ಶಾಖೆ ಉದ್ಘಾಟನೆ ಸಮಾರಂಭದಲ್ಲಿ ಭದ್ರತಾ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು. ಗೋವಾ ಉದ್ಯಮಿ, ಗೋವನ್ ಬೌಂಟಿ ಮ್ಯಾನೆಜಿಂಗ್ ಡೆರೆಕ್ಟರ್ ನರಸಿಂಹ ಪೂಜಾರಿ ಉದ್ಘಾಟಿಸಿ ಶುಭಹಾರೆಸಿದರು. 

ಬೆಂಗಳೂರು ಉದ್ಯಮಿ ಡಾ.ಜಿ.ಪಿ.ಶೆಟ್ಟಿ ಭದ್ರತಾಕೋಶ, ಕುಂದಾಪುರ ತಾಲೂಕು ಪಂಚಾಯಿತಿ ಅಧ್ಯಕ್ಷ ಭಾಸ್ಕರ ಬಿಲ್ಲವ ಗಣಕೀಕರಣ, ಕೋಟೇಶ್ವರ ಉದ್ಯಮಿ ಚಂದ್ರಶೇಖರ ಶೆಟ್ಟಿ ನಗದು ವಿಭಾಗ ಉದ್ಘಾಟಿಸಿದರು. 

ಉಡುಪಿ ಸಹಕಾರಿ ಸಂಘಗಳ ಉಪನಿಬಂಧಕ ಪ್ರವೀಣ್ ಡಿ.ನಾಯಕ್ ಠೇವಣಿ ಪತ್ರ ವಿತರಿಸಿದರು. ಕರ್ಣಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಬಿ.ಭಾಸ್ಕರ ಕಾಮತ್ ಸಾಲಪತ್ರ ಬಿಡುಗಡೆಗೊಳಿಸಿದರು. ಕೋಟೇಶ್ವರದ ಉದ್ಯಮಿ ಕೆ.ನಿರಂಜನ್ ಕಾಮತ್, ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ, ಹಿರಿಯ ಉದ್ಯಮಿ ಆಟಕೆರೆ ಶಾಂತಾರಾಮ ಪೆ, ಕೋಟೇಶ್ವರ ಗ್ರಾ.ಪಂ.ಅಧ್ಯಕ್ಷ ರಾಜಶೇಖರ ಶೆಟ್ಟಿ, ಗಂಗೊಳ್ಳಿ ಸರ್ವೀಸ್ ಕೋ-ಅಪರೇಟಿವ್ ಬ್ಯಾಂಕ್ ಅಧ್ಯಕ್ಷ ಆನಂದ ಬಿಲ್ಲವ, ಕಟ್ಟಡ ಮಾಲೀಕ ವೀರನಾರಾಯಣ, ಹೆಮ್ಮಾಡಿ ಪಂಚಗಂಗಾ ರೆತರ ಸೇವಾ ಸಹಕಾರಿ ಸಂಘ ಅಧ್ಯಕ್ಷ ರಾಜು ದೇವಾಡಿಗ, ಹೆಮ್ಮಾಡಿ ಉದ್ಯಮಿ ಹಸನ್ ಸಾಹೇಬ್, ನಿವತ್ತ ಸರಕಾರಿ ಅಧಿಕಾರಿ ಗೋಪಾಲ, ಸೊಸೆಟಿ ಅಧ್ಯಕ್ಷ ವಿಠಲ ಪೂಜಾರಿ, ಉಪಾಧ್ಯಕ್ಷ ಸುಧಾಕರ ಖಾರ್ವಿ, ಶಾಖಾ ವ್ಯವಸ್ಥಾಪಕ ರಾಜು, ನಿರ್ದೇಶಕರಾದ ಪ್ರಕಾಶ್ ಲೋಬೊ, ಎಚ್.ಮಹಾಬಲ ಬಿಲ್ಲವ, ಅವಿನಾಶ್ ಪಿಂಟೊ, ಎಂ.ವಿದ್ಯಾಧರ ಜೋಶಿ, ಕೆ.ರಾಜೇಶ್ ದೆವಜ್ಞ, ರತ್ನಾಕರ ಪೂಜಾರಿ, ಮಹೇಶ್ ಲಕ್ಷ್ಮಣ ಕೊತ್ವಾಲ್, ದಯಾನಂದ ಪೂಜಾರಿ, ಮರ್ವಿನ್ ಫರ್ನಾಂಡೀಸ್, ಸರೋಜ ಸಿ.ಪೂಜಾರಿ ಉಪಸ್ಥಿತರಿದ್ದರು. ಈ ಸಂದರ್ಭ ಸಂಸ್ಥೆಗೆ ಸಹಕರಿಸಿದ ಗ್ರಾಹಕರನ್ನು ಗೌರವಿಸಲಾಯಿತು. ಅಶೋಕ ಸಾರಂಗ ಪ್ರಾರ್ಥಿಸಿದರು. ಶಾಲೆಟ್ ಲೋಬೊ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ವಂದಿಸಿದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com