ಕುಂದಾಪುರದಲ್ಲಿ ಶಿಲುಬೆ ಯಾತ್ರೆ

ಕುಂದಾಪುರ: ಏಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನವನ್ನು ಕುಂದಾಪುರ ರೊಜರಿ ಅಮ್ಮನವರ ಇಗರ್ಜಿಯಲ್ಲಿ 14 ಹಂತಗಳ ಶಿಲುಬೆ ಯಾತ್ರೆ ಆಚರಿಸಲಾಯಿತು. ಏಸು ಕ್ರಿಸ್ತ ಅನುಭವಿಸಿದ ಅವಮಾನ ಕಷ್ಟ ಅಹಿಂಸೆಯಘಟನೆಗಳನ್ನು ನೆನೆದು, ಪ್ರಾರ್ಥನೆಯೊಂದಿಗೆ ನೆಡೆಯಿತು. 
      ಈ ಪವಿತ್ರ ಪ್ರಾರ್ಥನಾ ವಿಧಿಧಿಯು ಪುಣೆಯಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಧರ್ಮಗುರು ವಂ| ಐವನ್‌ ಡಿ'ಸೋಜಾ ಇವರ ನೇತೃತ್ವದಲ್ಲಿ ನೆಡೆಯಿತು. ವಲಯ ಪ್ರಧಾನ ಕುಂದಾಪುರ ಇಗರ್ಜಿಯ ಧರ್ಮಗುರು ವಂ| ಅನಿಲ್‌ ಡಿ'ಸೋಜಾ, ಧರ್ಮಗುರು ಸಹಾಯಕ ಧರ್ಮ ಗುರು ವಂ| ಪ್ರವೀಣ್‌ ಮಾರ್ಟಿಸ್‌, ಧರ್ಮಗುರು ವಂ| ಪ್ರಕಾಶ್‌ ಡಿ'ಸೋಜಾ ಧಾರ್ಮಿಕ ವಿಧಿ ವಿಧಾನ ಗಳಲ್ಲಿ ಸಹಭಾಗಿತ್ವ ವಹಿಸಿದ್ದರು.ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com