ಹೆಬ್ಟಾರಬೆಟ್ಟು ರಸ್ತೆ ಕಾಮಗಾರಿಗೆ ಶಾಸಕರಿಂದ ಚಾಲನೆ

ಮರವಂತೆ: ಗ್ರಾಮೀಣ ಪ್ರದೇಶದ ರಸ್ತೆಗಳು ಗ್ರಾಮಗಳನ್ನು ಬೆಸೆಯುವ ಕೊಂಡಿಗಳಾಗಿದ್ದು, ಈ  ರಸ್ತೆ ಕಾಮಗಾರಿಗಳಿಂದ  ಜನರ ಆರ್ಥಿಕತೆ ಮತ್ತು ಮಕ್ಕಳ  ಶೈಕ್ಷಣಿಕ ವ್ಯವಸ್ಥೆಗೆ  ಪೂರಕವಾದ ಮೂಲ ಸೌಕರ್ಯ ಒದಗಿಸಿದಂತಾಗುತ್ತದೆ.  ಅಲ್ಲದೆ ಗ್ರಾಮೀಣ ಪ್ರದೇಶದಲ್ಲಿ ಬೆಳೆಯಲಾದ‌ ಕೃಷಿಕರಿಗೆ  ಹೆಚ್ಚಿನ ಪ್ರೋತ್ಸಾಹ ಹಾಗೂ ಬೇಡಿಕೆ ದೊರೆತಂತಾಗುತ್ತದೆ   ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.

ಅವರು ಮರವಂತೆ ಗ್ರಾಮದ ಹೆಬ್ಟಾರ ಬೆಟ್ಟು ಎಂಬಲ್ಲಿನ ರಸ್ತೆ ಅಭಿವೃದ್ಧಿಗೆ ಮೂಲ ಸೌಲಭ್ಯಕ್ಕೆ  ರೂ. 2 ಲಕ್ಷ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

 ತಾ.ಪಂ.ಸದಸ್ಯ ರಾಜು ಪೂಜಾರಿ ಮಾತನಾಡಿ ಮರವಂತೆ ತನ್ನ ಎಲ್ಲಾ ಮೂಲ ಸೌಕರ್ಯಗಳನ್ನು ಒಳಗೊಂಡು  ಅಭಿವೃದ್ಧಿಹೊಂದುತ್ತಿದ್ದು,  ಉತ್ತಮ  ಪ್ರವಾಸಿ ಕೇಂದ್ರವಾಗಿ ಈಗಾಗಲೇ ಹೆಸರುವಾಸಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮರವಂತೆ ಗ್ರಾ.ಪಂ. ಅಧ್ಯಕ್ಷೆ ಸುಗುಣಾ, ಪಂಚಾಯತ್‌ ಅಭಿವೃದ್ಧಿ   ಅಧಿಧಿಕಾರಿ ಪೂರ್ಣಿಮಾ, ಮಾಜಿ ಅಧ್ಯಕ್ಷ ಎಸ್‌.ಜನಾರ್ದನ್‌, ಎಂ.ಎಸ್‌. ಶೇಷ ಖಾರ್ವಿ, ರಾಜು ದೇವಾಡಿಗ ತ್ರಾಸಿ, ಹಾಲು ಉ.ಸ. ಸಂಘದ ಅಧ್ಯಕ್ಷೆ ನಾಗಮ್ಮ  ಪೂಜಾರಿ, ಮತ್ತು ಹಿರಿಯ ನಾಗರಿಕ ಮುದುರ ಪೂಜಾರಿ,  ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com