ನಂದಿಕೇಶ್ವರ ದೇವರ ವಾರ್ಷಿಕೋತ್ಸವ ಹಾಗೂ ಭಜನಾ ಕಾರ್ಯಕ್ರಮ

ಬೈಂದೂರು: ಸಮೀಪದ ಬಿಜೂರು ಮುರ್ಗೋಳಿಹಕ್ಲು ಶ್ರೀ ನಂದಿಕೇಶ್ವರ ದೈವಸ್ಥಾನದ ವಾರ್ಷಿಕೋತ್ಸವ ಹಾಗೂ 39ನೇ ವರ್ಷದ ವಾರ್ಷಿಕ ಭಜನಾ ಕಾರ್ಯಕ್ರಮದ ಅಂಗವಾಗಿ ಏಕಾಹ ಅಖಂಡ ಭಜನಾ ಕಾರ್ಯಕ್ರಮ ಎಪ್ರಿಲ್ 14ರಿಂದ 16ರ ತನಕ ಜರುಗಲಿದೆ.
    ಎಪ್ರಿಲ್ 14ರ ಮಂಗಳವಾರ ಬೆಳಿಗ್ಗೆ ವೇದಮೂರ್ತಿ ಷಡಕ್ಷರಿ ಕೃಷ್ಣ ಭಟ್ ಮತ್ತು ಮಕ್ಕಿ ಸುಬ್ಬಣ್ಣ ಭಟ್ ಅವರ ಸಹಭಾಗಿತ್ವದಲ್ಲಿ ಶ್ರೀ ನಂದಿಕೇಂಶ್ವರ ಸಪರಿವಾರ ದೈವಗಳ ಹಾಗೂ  ನಾಗದೇವರ ವಾರ್ಷಿಕ ಮಹೋತ್ಸವ ಜರುಗಲಿದೆ.
        ಎಪ್ರಿಲ್ 15ರ ಬುಧವಾರ ಅಖಂಡ ಭಜನಾ ಕಾರ್ಯಕ್ರಮವೂ ಪ್ರಾರಂಭಗೊಳ್ಳಲಿದೆ. ಎಪ್ರಿಲ್ 16ರ ಗುರುವಾರ ಭಜನಾ ಮಂಗಲೋತ್ಸವ, ಗೆಂಡಸೇವೆ, ಹರಿಕಥಾ ಕಾಲಾಕ್ಷೇಪ ಜರುಗಲಿದೆ. ಇಲ್ಲದೇ ಮೂರೂ ದಿನವೂ ಕೂಡ ಮಹಾ ಅನ್ನಸಂತರ್ಪಣೆ ಜರುಗಲಿದ್ದು ಎಲ್ಲಾ ಕಾರ್ಯಕ್ರಮಕ್ಕೂ ಭಕ್ತ ಮಹಾಶಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಕೋರಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com