ಮುಲ್ಲಿಬಾರು ಶಾಲೆಯ ದತ್ತು ಸ್ವೀಕಾರ

ಬೈಂದೂರು: ಇಲ್ಲಿನ ಗ್ರಾಮಾಂತರ ಪ್ರದೇಶವಾದ ಹೊಸೂರಿನ ಮುಲ್ಲಿಬಾರು ಸ.ಹಿ.ಪ್ರಾ. ಶಾಲೆಯಲ್ಲಿ ಕಳೆದ 15 ದಿನಗಳಿಂದ ವೈವಿಧ್ಯಮಯ ಕಲಿಕೆಯನ್ನು ಜಿಲ್ಲೆಯ ನಾನಾ ಕಲಾವಿದರಿಂದ ನಡೆಯುತ್ತಿದ್ದು ಇದರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೈಂದೂರಿನ ಶಾಸಕರಾದ ಶ್ರೀ ಕೆ. ಗೋಪಾಲ ಪೂಜಾರಿಯವರು ಇಂತಹ ಕಲಿಕೋತ್ಸವದಿಂದ ಗ್ರಾಮೀಣ ಮಕ್ಕಳ ಪ್ರತಿಭೆ ಬೆಳಗುವಂತಾಗಲಿ ಎಂದು ಹೆಳುತ್ತಾ ಮುಲ್ಲಿಬಾರು ಶಾಲೆಯು ತನ್ನ ವೈಶಿಷ್ಟ್ಯಪೂರ್ಣ ಶಿಕ್ಷಣದೊಂದಿಗೆ ಉತ್ತಮ ಸಾಧನೆ ಮಾಡುತ್ತಿರುವುದು ಶ್ಲಾಘನೀಯ ಎಂದರು ಕಾರ್ಯಕ್ರಮದಲ್ಲಿ ಅತಿಥಿಗಳಾದ ಜಿಲ್ಲಾ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಗೌರಿ ದೇವಾಡಿಗ, ತಾ.ಪಂ ಸದಸ್ಯ ಶ್ರೀ ರಾಜು ಪೂಜಾರಿ, ಹಿರಿಯ ಪತ್ರಕರ್ತ ಎಸ್. ಜನಾರ್ಧನ ಮರವಂತೆ ಕಾರ್ಯಕ್ರಮಕ್ಕೆ ಶುಭಹಾರೈಸಿದರು. 
   ಸ್ಥಳೀಯ ಗ್ರಾ.ಪಂ ಅಧ್ಯಕ್ಷರಾದ ಶ್ರೀ ನಾಗರಾಜ ಶೆಟ್ಟಿಯವರು ಸದ್ರೀ ಶಾಲೆಯನ್ನು ದತ್ತು ಪಡೆದಿದ್ದು ಇದೇ ಸಂದರ್ಭದಲ್ಲಿ ಶಾಸಕರು ಹಸ್ತಾಂತರಿಸಿದರು. 
     ಸಮಾರಂಭದಲ್ಲಿ ಗ್ರಾ.ಪಂ ಸದಸ್ಯರಾದ ಶ್ರೀಮತಿ ಲಲಿತಾ ನಾಗಪ್ಪ ಮರಾಠಿ, ಶ್ರೀ ಸಿ.ಜೆ  ರೋಯಿ, ಶ್ರೀಮತಿ ನಯನಾ ಭಂಡಾರಿ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಶ್ರೀ ಸುರೇಶ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸರ್ವೋತ್ತಮ ಭಟ್, ಶ್ರೀ ರಾಮರಾಯ, ಸಿ.ಆರ್.ಪಿ ಚಂದ್ರ ಎನ್. ಬಿಲ್ಲವ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಶ್ರೀ ತಿಮ್ಮ ಮರಾಠಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಶ್ರೀ ಗಿರೀಶ್.ಪಿ ಮೆಸ್ತ ಸ್ವಾಗತಿಸಿ ಸಹಶಿಕ್ಷರಾದ ಸುಧಾಕರ.ಪಿ ಕಾರ್ಯಕ್ರಮ ನಿರೂಪಿಸಿದರು. ಹಾಲೇಶ್.ಡಿ.ಆರ್ ವಂದಿಸಿ, ಶ್ರೀ ರಾಮನಾಥ ಮೆಸ್ತ ಹಾಗೂ ಶ್ರೀ ವಿನಾಯಕ ಪಟಗಾರ್ ಕಾರ್ಯಕ್ರಮದ  ವರದಿ ನೀಡಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com