ಸಪ್ತಸ್ವರ ವಿವಿಧೋದ್ದೇಶ ಸ. ಸಂಘದ ನಾಗೂರು ಶಾಖೆ ಉದ್ಘಾಟನೆ

ಬೈಂದೂರು: ಸಹಕಾರ ಕ್ಷೇತ್ರ ಚೆನ್ನಾಗಿದ್ದರೆ ಊರು ಉತ್ತಮವಾಗುತ್ತದೆ. ಸಹಕಾರ ಕ್ಷೇತ್ರಕ್ಕೆ ಗುರುತರವಾದ ಜವಾಬ್ದಾರಿಯಿದ್ದು ಅದು ಜನರ ಜೀವನಾಡಿಯಾಗಿದೆ. ಸಹಕಾರ ಸಂಘಗಳಿಂದ ಸಮಾಜ ಕಟ್ಟಲು ಸಾಧ್ಯ ಎಂದು ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀ ನಿವಾಸ ಪೂಜಾರಿ ಹೇಳಿದರು.

ಅವರು ತಲ್ಲೂರಿನ ಸಪ್ತಸ್ವರ ವಿವಿಧೋದ್ದೇಶ ಸಹಕಾರ ಸಂಘ ನಿ.ಯ ನಾಗೂರಿನ ನೂತನ ಶಾಖೆಯ ಉದ್ಘಾಟನಾ ಸಮಾರಂಭದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿ ವ್ಯಕ್ತಿಯೂ ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು. ಜಿಲ್ಲೆಯ ಸಹಕಾರ ಕ್ಷೇತ್ರ ಅಪಾರ ಹಿನ್ನೆಲೆ ಹೊಂದಿದೆ ಎಂದರು.


ನೂತನೆ ಶಾಖೆಯನ್ನು ಉದ್ಘಾಟಿಸಿದ ಕುಂದಾಪುರ ಎಜುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಬಿ.ಎಂ. ಸುಕುಮಾರ ಶೆಟ್ಟಿ ಮಾತನಾಡಿ, ಸಹಕಾರ ಕ್ಷೇತ್ರದ ಕಲ್ಪನೆ ಸಮಾಜದ ಅಭಿವೃದ್ಧಿಯ ಚಿಂತನೆಯನ್ನು ಹೊಂದಿರುತ್ತದೆ. ಸಹಕಾರ ಕ್ಷೇತ್ರ ಸಂಘಟನೆ ಮತ್ತು ಆರ್ಥಿಕ ಸದೃಢ‌ತೆಯನ್ನು ನೀಡುತ್ತದೆ ಎಂದರು.

ಕಿರಿಮಂಜೇಶ್ವರ ಗ್ರಾ.ಪಂ. ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ ಷೇರುಪತ್ರ ಬಿಡುಗಡೆ ಮಾಡಿದರು. ಅಣ್ಣಯ್ಯ ಶೇರಿಗಾರ್‌ ಅಜ್ಜಿಮನೆ ಬಾಕೂìರು ಕಂಪ್ಯೂಟರ್‌ ಉದ್ಘಾಟನೆಗೈದರು. ಕಾರ್ಪೂರೇಶನ್‌ ಬ್ಯಾಂಕ್‌ ವಲಯ ಮಹಾ ಪ್ರಬಂಧಕ ವಿ.ಎನ್‌. ಹೆಗ್ಡೆ ಸಾಲಪತ್ರ ವಿತರಿಸಿದರು. ಶಾಂತ ದೇವಾಡಿಗ ಭದ್ರತಾ ಕೊಠಡಿ ಉದ್ಘಾಟಿಸಿದರು. ಸಪ್ತಸ್ವರ ವಿ.ಸ.ಸಂ.ನಿ ತಲ್ಲೂರು ಅಧ್ಯಕ್ಷ ಎಂ. ಸಂಜೀವ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ, ರಾಜು ದೇವಾಡಿಗ ತ್ರಾಸಿ, ತಾ.ಪಂ. ಸದಸ್ಯ ರಾಜು ಪೂಜಾರಿ, ವಕೀಲ ರಾಜ್‌ ಕುಮಾರ್‌ ನೆಂಪು, ಜಿ.ಪಂ. ಶಿಕ್ಷಣ ಮತ್ತು ಸ್ಥಾಯೀ ಸಮಿತಿ ಸದಸ್ಯೆ ಗೌರಿ ದೇವಾಡಿಗ, ಗಣೇಶ ದೇವಾಡಿಗ ಕಿರಿಮಂಜೇಶ್ವರ, ಆನಂದ ಬಿಲ್ಲವ ಉಪ್ಪಿನಕುದ್ರು, ರತ್ನಾಕರ ಉಡುಪ ಒಡೆಯರ ಮಠ, ರಮೇಶ ದೇವಾಡಿಗ ಉಪ್ಪಿನಕುದ್ರು, ಉದಯ ಕುಮಾರ್‌ ಹಟ್ಟಿಯಂಗಡಿ, ಶ್ರೀಧರ ದೇವಾಡಿಗ, ಸದಾನಂದ ಶೇರುಗಾರ್‌ ಉಪ್ಪಿನಕುದ್ರು, ಕೃಷ್ಣ ದೇವಾಡಿಗ ಬೈಂದೂರು, ಈಶ್ವರ ದೇವಾಡಿಗ ನಾಗೂರು, ಶಾರದಾ ದೇವಾಡಿಗ ನಾಗೂರು, ಎಂ.ಎನ್‌. ಶೇರುಗಾರ್‌ ಬೈಂದೂರು, ಸುಧಾಕರ ದೇವಾಡಿಗ ಉಪಾಧ್ಯಕ್ಷರು, ಆಡಳಿತ ಮಂಡಳಿಯ ನಿರ್ದೇಶಕರಾದ ಕುಷ್ಟ ದೇವಾಡಿಗ ಹಟ್ಟಿಯಂಗಡಿ, ಬಸವ ದೇವಾಡಿಗ ಉಪ್ಪಿನಕುದ್ರು, ರಾಘವೇಂದ್ರ ದೇವಾಡಿಗ ಹೊಸಕಳಿ, ಚಂದ್ರ ದೇವಾಡಿಗ ಹಕೂìರು, ರಾಜೇಶ ದೇವಾಡಿಗ ತ್ರಾಸಿ, ಚಂದ್ರಶೇಖರ ದೇವಾಡಿಗ ನಾಡ, ಶೋಭಾ ದೇವಾಡಿಗ ನೇರಳಕಟ್ಟೆ ಮುಂತಾದವರು ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿ ದೇವಾಡಿಗ ಸ್ವಾಗತಿಸಿದರು. ಜನಾರ್ದನ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ರಾಘವೇಂದ್ರ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com