ಶಂಕರನಾರಾಯಣಕ್ಕೆ ರೋಟರಿ ಗವರ್ನರ್‌ ಅಧಿಕೃತ ಭೇಟಿ

ಸಿದ್ದಾಪುರ: ಅಂತಾರಾಷ್ಟ್ರೀಯ ಸಂಸ್ಥೆಯಾದ ರೋಟರಿಯು ಸಾಮಾಜಿಕ ಸೇವೆಯ ಮೂಲಕ ತನ್ನನ್ನು ಗುರುತಿಸಿಕೊಂಡಿದೆ. ಪೋಲಿಯೋ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಈ ಸಂಸ್ಥೆ ಜಗತ್ತಿನಾದ್ಯಂತ ತನ್ನ ಕಾರ್ಯವ್ಯಾಪ್ತಿಯನ್ನು ಹೊಂದಿದೆ. ರೋಟರಿ ಕ್ಲಬ್‌ ಶಂಕರನಾರಾಯಣ ಕೂಡಾ ಉತ್ತಮ ಕಾರ್ಯಕ್ರಮಗಳ ಮೂಲಕ ರೋಟರಿ ಜಿಲ್ಲೆ 3180ರಲ್ಲಿ ತನ್ನ ಛಾಪನ್ನು ಮೂಡಿಸಿದೆ. ಈ ಸಂಸ್ಥೆಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸೇರ್ಪಡೆಗೊಂಡು ಇದನ್ನು ಬಲಿಷ್ಠಗೊಳಿ ಸಬೇಕು ಎಂದು ರೋಟರಿಯ ಜಿಲ್ಲಾ ಗವ ರ್ನರ್‌ ಡಾ| ಭಾಸ್ಕರ್‌ ಅವರು ಹೇಳಿದರು.

ಅವರು ರೋಟರಿ ಕ್ಲಬ್‌ ಶಂಕರನಾರಾ ಯಣದ ವತಿಯಿಂದ ಶಂಕರ ನಾರಾಯಣ ಅಮ್ಮಾ ಸಭಾಭವನದಲ್ಲಿ ನಡೆದ ಗವರ್ನರ್‌ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಗಣ್ಯರನ್ನು ಸಮ್ಮಾನಿಸಿ ಮಾತನಾಡಿದರು.

ಸಹಾಯಕ ಗವರ್ನರ್‌ ಗಣೇಶ್‌ ಶೆಟ್ಟಿ ಮೊಳಹಳ್ಳಿ ಹಾಗೂ ವಲಯ ಸೇನಾನಿ ಶ್ಯಾಮ ಶೆಟ್ಟಿ ಶುಭ ಹಾರೈಸಿದರು. ಪಿಎಚ್‌ಡಿ ಪದವಿ ಪಡೆದ ಉಪನ್ಯಾಸಕ ಡಾ| ಶೇಖರ್‌, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಉದಯಕುಮಾರ್‌ ಶೆಟ್ಟಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಭಾಗವತ ರಾಘವೇಂದ್ರ ಮಯ್ಯ ಅವರನ್ನು ಕ್ಲಬ್‌ ವತಿಯಿಂದ ಸಮ್ಮಾನಿಸಲಾಯಿತು.

ಶಂಕರನಾರಾಯಣ ರೋಟರಿ ಕ್ಲಬ್‌ ಅಧ್ಯಕ್ಷ ಕೃಷ್ಣಮೂರ್ತಿ ಡಿ.ಶೇಟ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಡಾ| ಯು. ಎಂ. ಮಧ್ಯಸ್ಥ ಸ್ವಾಗತಿಸಿದರು. ಉದಯ ಕಾಮತ್‌ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಕೆ. ಪಿ. ಉಡುಪ ವರದಿ ವಾಚಿಸಿದರು. ವಿಶ್ವನಾಥ ಮಧ್ಯಸ್ಥ, ದಯಾನಂದ ರಾವ್‌, ಸುಧಾಕರ ಹೆಗ್ಡೆ, ನಾಗೇಶ್ಚಂದ್ರ ಭಟ್‌ ಸಮ್ಮಾನಿತರ ಹಾಗೂ ಅತಿಥಿಗಳನ್ನು ಪರಿಚಯಿಸಿದರು. ಜನಾರ್ದನ ಭಟ್‌ ಹೊಸ ಸದಸ್ಯರ ವಿವರ ನೀಡಿದರು. ಅನಂತ ಉಡುಪ ಇತರ ಕ್ಲಬ್‌ಗಳ ಹಾಜರಾತಿಯ ವಿವರ ನೀಡಿದರು. ಕೃಷ್ಣಮೂರ್ತಿ ಬಾಯಿರಿ ಲಕ್ಕಿ ರೊಟೇರಿಯನ್‌ ಕಾರ್ಯಕ್ರಮ ನಡೆಸಿಕೊಟ್ಟರು. ಸುರೇಶ್‌ ಐತಾಳ ನಗೆ ಚಟಾಕಿ ಸಿಡಿಸಿದರು. ಹದ್ದೂರು ರಾಜೀವ ಶೆಟ್ಟಿ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com