ಎ24-26- ಸುರಭಿ ಕಲಾಸಿರಿ ಸಾಂಸ್ಕ್ರತಿಕ ವೈಭವ

ಬೈಂದೂರು: ಇಲ್ಲಿನ ಕಲಾಸಂಸ್ಥೆ ಸುರಭಿಯ ಆಶ್ರಯದಲ್ಲಿ ಬೈಂದೂರಿನ ಮನ್ಮಹಾರಥೋತ್ಸವ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬೆಂಗಳೂರು ಇವರ ಸಹಕಾರದಲ್ಲಿ ಬೈಂದೂರಿನ ಶಾರದಾ ವೇದಿಕೆಯಲ್ಲಿ ಪ್ರತಿದಿನ ಸಂಜೆ ಗಂಟೆ 6 ಕ್ಕೆ ನಾಲ್ಕು ದಿನಗಳ ಸಾಂಸ್ಕ್ರತಿಕ ವೈಭವ (ರಂಗೋತ್ಸವ - ನೃತ್ಯೋತ್ಸವ - ಯಕ್ಷೋತ್ಸವ - ರಂಗವೈಭವ)  ಅನಾವರಣಗೊಳ್ಳಲಿದೆ.
     ಎಪ್ರಿಲ್ 24ರಂದು ಉಡುಪಿಯ ಕೊಡವೂರಿನ ನೃತ್ಯ ನಿಕೇತನ ಕಲಾತಂಡದಿಂದ ನೃತ್ಯ ಸಿಂಚನ, ಎ.25ರಂದು ಬ್ರಹ್ಮಾವರದ ಭೂಮಿಕಾ ಹಾರಾಡಿ ರಂಗತಂಡದಿಂದ ಅಗ್ನಿ ಲೋಕ ನಾಟಕ, ಎ.26 ರಂದು ಸುರಭಿ ಬೈಂದೂರಿನ ಆಯ್ದ ಹಿರಿಯ ಕಲಾವಿದರಿಂದ ವೀರವೃಷಸೇನ ಯಕ್ಷಗಾನ, ದಿನಾಂಕ ೨೯-೦೪-೨೦೧೫ ರಂದು ನೀನಾಸಂ ಪದವೀಧರರ ರಂಗ ತಂಡ ಥಿಯೇಟರ್ ಸಮುರಾಯ್ ಸಾಗರ ಇವರಿಂದ ಹಸಿದ ಕಲ್ಲುಗಳು ನಾಟಕ ನಡೆಯಲಿದ್ದು, ಹಿರಿಯಪತ್ರಕರ್ತ ಶ್ರೀ ಎಸ್ ಜನಾರ್ಧನ ಮರವಂತೆಯವರ ಸಮಾರೋಪ ನುಡಿಗಳೊಂದಿಗೆ ಸಮಾಪ್ತಿಗೊಳ್ಳಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com