ಕುಂದಾಪುರ: ತಾಲೂಕಿನ ತೆಕ್ಕಟ್ಟೆ ಫ್ರೆಂಡ್ಸ್ (ರಿ.) ಆಶ್ರಯದಲ್ಲಿ ನಡೆಯುತ್ತಿರುವ ಬೇಸಗೆ ಕಲಾ ಶಿಬಿರ 2015ಕ್ಕೆ ಕರ್ನಾಟಕ ರಾಜ್ಯ ಅಗ್ನಿ ಶಾಮಕ ಮತ್ತು ತುರ್ತುಸೇವೆಯು ಅಗ್ನಿ ಸುರಕ್ಷಾ ಸಪ್ತಾಹದ ಅಂಗವಾಗಿ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗಾಗಿ ಕುಂದಾಪುರ ಅಗ್ನಿ ಶಾಮಕ ದಳದ ಸಿಬಂದಿಯಿಂದ ವಿಶೇಷ ಪ್ರಾತ್ಯಕ್ಷಿಕೆ ನಡೆಯಿತು.
ಈ ಸಂದರ್ಭದಲ್ಲಿ ತೆಕ್ಕಟ್ಟೆ ಫ್ರೆಂಡ್ಸ್ (ರಿ.)ನ ಸಂಘಟಕ ಪ್ರಕಾಶ್ ಶೆಟ್ಟಿ ತೆಕ್ಕಟ್ಟೆ, ಕೃಷ್ಣಮೂರ್ತಿ ಕೊಠಾರಿ, ಕಾರ್ಯಕ್ರಮ ಸಂಯೋಜಕ ನ್ಯಾಯವಾದಿ ಸೃಜನ್ ತೆಕ್ಕಟ್ಟೆ, ಸಂಪನ್ಮೂಲ ವ್ಯಕ್ತಿಗಳಾದ ಶಿಕ್ಷಕ ಚರಣ್, ಚಿತ್ರಕಲಾ ಶಿಕ್ಷಕರಾದ ಸಂದೇಶ್, ಸದಾನಂದ ಸಾಸ್ತಾನ ಹಾಗೂ ತೆಕ್ಕಟ್ಟೆ ಫ್ರೆಂಡ್ಸ್ (ರಿ.)ನ ಸರ್ವಸದಸ್ಯರು ಮತ್ತು ಸ್ಥಳೀಯ ಸಾರ್ವಜನಿಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಅಗ್ನಿ ಆಕಸ್ಮಿಕವಾದಾಗ ಪ್ರಾಥಮಿಕ ವಾಗಿ ತೆಗೆದುಕೊಳ್ಳಬೇಕಾದ ತುರ್ತು ಕ್ರಮ ಹಾಗೂ ರಕ್ಷಣೆ ಮೊದಲಾದ ವುಗಳ ಬಗ್ಗೆ ವಿಶೇಷವಾದ ಮಾಹಿತಿ ನೀಡಲಾಯಿತು.
0 comments:
Post a Comment