ಏ.5-7: ಉಪ್ಪಿನಕುದ್ರು ಶಿಲಾಮಯ ಗರ್ಭಗುಡಿ ಸಮರ್ಪಣೆ, ಅಷ್ಟಬಂಧ ಬ್ರಹ್ಮಕಲಶೋತ್ಸವ

ಉಪ್ಪಿನಕುದ್ರು ಉದ್ಭವ ಶ್ರೀ ಲಲಿತಾ ದುರ್ಗಾಪರಮೇಶ್ವರಿ, ನಾಗ-ನಾಗಯಕ್ಷಿ, ಭದ್ರಕಾಳಿ ಸನ್ನಿಧಾನ
ಕುಂದಾಪುರ: ಸಮೀಪದ ಉಪ್ಪಿನಕುದ್ರು ಮೂಡುಬೆಟ್ಟುವಿನ ಉದ್ಭವ ಶ್ರೀ ಲಲಿತಾ ದುರ್ಗಾಪರಮೇಶ್ವರಿ ನಾಗ - ನಾಗಯಕ್ಷಿ, ಭದ್ರಕಾಳಿ ಸಪರಿವಾರ ದೇವತೆಗಳ ಸನ್ನಿಧಾನಕ್ಕೆ ನೂತನ ಶಿಲಾಮಯ ಗರ್ಭಗುಡಿ ಸಮರ್ಪಣೆ, ದೇವತಾ ಶಕ್ತಿ ಪ್ರತಿಷ್ಠಾಪನೆ, ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮಹಾಅನ್ನಸಂತರ್ಪಣೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಏಪ್ರಿಲ್ ೦೫ರಿಂದ ೦೭ರವರೆಗೆ ನಡೆಯಲಿದೆ.
     ಏಪ್ರಿಲ್ ೦೫ರಂದು ಬೆಳಿಗ್ಗೆ ೭.೦೦ ರಿಂದ ಋತ್ವಿಜರ ಸ್ವಾಗತ, ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮಹೂರ್ತ, ಪುಣ್ಯಾಹ ವಾಚನ, ಆದ್ಯ ಗಣಪತಿ ಯಾಗ, ಪ್ರಸಾದ ವಿತರಣೆ, ಸಂಜೆ ಗಂಟೆ ೪ ರಿಂದ ಸಪ್ತಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಮಂತ್ರ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ಪ್ರಾಕಾರ ಬಲಿ, ನಾಗಬಿಂಬ ಶುದ್ಧಿ, ಶ್ರೀ ದೇವರ ಬಿಂಬ ಶುದ್ಧಿ, ಸಯ್ಯಾದಿವಾಸ, ನಾಗಬನದಲ್ಲಿ ಮಂಡಲ ರಚನೆ ಇತ್ಯಾದಿ, ಏಪ್ರಿಲ್ ೦೬ರಂದು ಬೆಳಿಗ್ಗೆ ೭.೦೦ ರಿಂದ ಸ್ವಸ್ತಿ ಪುಣ್ಯಾಹ ವಾಚನ, ನಾಗದೇವರಿಗೆ ಪ್ರತಿಷ್ಠಾ ಪ್ರಧಾನ ಹೋಮ, ತತ್ವ ಹೋಮ, ತತ್ವ ಕಲಶ, ನಾಗ ದೇವರಿಗೆ ೨೫ ಕಲಶಾಧಿವಾಸ, ಬೆಳಿಗ್ಗೆ ಗಂಟೆ ೯.೨೫ರ ವೃಷಭ ಲಗ್ನದಲ್ಲಿ ನಾಗಯಕ್ಷಿ ಪ್ರತಿಷ್ಠೆ, ಪ್ರಾಯಶ್ಚಿತ್ತ ಪವಮಾನ ಸೂಕ್ತ ಹೋಮ, ಆಶ್ಲೇಷಾಬಲಿ, ಕಲ್ಪೋಕ್ತ ಪೂಜೆ, ಕಲಶಾಭಿಷೇಕ, ಪ್ರಸನ್ನ ಪೂಜೆ, ಬೆಳಿಗ್ಗೆ ಗಂಟೆ ೧೦.೨೫ರ ವೃಷಭ ಲಗ್ನ ಸುಮುಹೂರ್ತದಲ್ಲಿ ಶ್ರೀ ಉದ್ಭವ ಲಲಿತಾ ದುರ್ಗಾಪರಮೇಶ್ವರಿ ಪ್ರತಿಷ್ಠೆ, ಪಂಚಮೃತ ಅಭಿಷೇಕ, ಕಲಶಾಭಿಷೇಕ ಪ್ರಸನ್ನ ಪೂಜೆ, ದಂಪತಿ ಪೂಜೆ, ಕನ್ನಿಕಾ ಆರಾಧನೆ, ಬ್ರಾಹ್ಮಣಾರಾಧನೆ, ಪ್ರಸಾದ ವಿತರಣೆ, ಸಂಜೆ ಗಂಟೆ ೪ ರಿಂದ ದುರ್ಗಾಸನ್ನಿಧಿಯಲ್ಲಿ ದುರ್ಗಾ ನಮಸ್ಕಾರ ಪೂಜೆ, ಲಲಿತಾ ಸಹಸ್ರನಾಮ ಪಾರಾಯಣ, ಸುಹಾಸಿನಿ ಆರಾಧನೆ, ಪರಿವಾರ ದೈವಗಳ ಬಿಂಬ ಶುದ್ಧಿ, ಪ್ರತಿಷ್ಠಾ ಹೋಮ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಪ್ರಸನ್ನ ಪೂಜೆ, ಏಪ್ರಿಲ್ ೦೭ ರಂದು ಬೆಳಿಗ್ಗೆ ೭.೦೦ ರಿಂದ ಸ್ವಸ್ತಿ ಪುಣ್ಯಾಹ ವಾಚನ, ಗಣಪತಿ ಯಾಗ, ದುರ್ಗಾ ಹೋಮ, ಪ್ರಧಾನ ಹೋಮ, ಶ್ರೀ ದೇವರಿಗೆ ೧೦೮ ಕಲಶ ಸಹಿತ ಬ್ರಹ್ಮ ಕಲಶಾಭಿಷೇಕ, ಕಲ್ಪೋಕ್ತ ಪೂಜೆ, ಪ್ರಸನ್ನ ಪೂಜೆ, ನಾಗ-ನಾಗಯಕ್ಷಿ ದೇವರ ಸಂದರ್ಶನ, ಪ್ರಸಾದ ವಿತರಣೆ ಮತ್ತು ಮಹಾ ಅನ್ನಸಂತರ್ಪಣೆ, ಸಂಜೆ ಶ್ರೀ ದೇವರಿಗೆ ದೀಪಾಲಂಕಾರ ಸೇವೆ, ಭದ್ರಕಾಳಿ ಅಮ್ಮನವರ ಸಾನಿಧ್ಯದಲ್ಲಿ ದೀಪ ನಮಸ್ಕಾರ, ಪ್ರಸನ್ನ ಪೂಜೆ, ಶ್ರೀ ಉದ್ಭವ ಲಲಿತಾ ವನದುರ್ಗಾಪರಮೇಶ್ವರಿ ದೇವರಿಗೆ ರಂಗಪೂಜೆ, ನಂತರ ಶ್ರೀ ದೇವರಿಗೆ ರಂಗಪೂಜೆ, ಉತ್ಸವ ಬಲಿ, ಪ್ರಸಾದ ವಿತರಣೆ ನಡೆಯಲಿದೆ. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಎಡಪದವು ವೇದಮೂರ್ತಿ ಬ್ರಹ್ಮಶ್ರೀ ಮುರಳೀಧರ ತಂತ್ರಿಯವರ ಮಾರ್ಗದರ್ಶನದಲ್ಲಿ, ವೇದಮೂರ್ತಿ ಬ್ರಹ್ಮಶ್ರೀ ಎ.ಸುಬ್ರಹ್ಮಣ್ಯ ಮಧ್ಯಸ್ಥರವರ ನೇತೃತ್ವದಲ್ಲಿ, ಉಪೇಂದ್ರ ಎಸ್ ಪೂಜಾರಿ ಹಾಗೂ ಹತ್ತು ಸಮಸ್ತರ ಮುಂದಾಳತ್ವದಲ್ಲಿ ಜರುಗಲಿದೆ. ಉತ್ಸವದ ಅಂಗವಾಗಿ ಏಪ್ರಿಲ್ ೦೫ರಂದು ರಾತ್ರಿ ೧೦ಕ್ಕೆ ಸ್ಥಳೀಯ ಮಕ್ಕಳಿಂದ ನೃತ್ಯ ವೈಭವ, ಏಪ್ರಿಲ್ ೦೬ರಂದು ರಾತ್ರಿ ೧೦ಕ್ಕೆ ಶ್ರೀ ಶನೇಶ್ವರ ಕೃಪಾ ಪೋಷಿತ ಯಕ್ಷಗಾನ ಮಂಡಳಿ ಚೋನಮನೆ ಆಜ್ರಿ ಇವರಿಂದ ಉಪ್ಪಿನಕುದ್ರು ಕ್ಷೇತ್ರ ಮಹಾತ್ಮೆ ಯಕ್ಷಗಾನ, ಏಪ್ರಿಲ್ ೦೭ರಂದು ರಾತ್ರಿ ೧೦ಕ್ಕೆ ನೇತಾಜಿ ಕಮಿಟಿ ಫ್ರೆಂಡ್ಸ್ ಇವರ ೧೭ನೇ ವಾರ್ಷಿಕೋತ್ಸವದ ಅಂಗವಾಗಿ ಶಿವಶಕ್ತಿ ಕಲಾತಂಡ ಕನ್ನುಕೆರೆ ತೆಕ್ಕಟ್ಟೆ ಇವರಿಂದ ನಗೆ ನಾಟಕ ಎಂತ ಆತ್ ಕಾಂಬ(ದೇವ್ರಿದ್ದ) ಪ್ರದರ್ಶನಗೊಳ್ಳಲಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com